Monday, April 29, 2024
Homeಇತರಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮುಂಜುನಾಥ ಸ್ವಾಮಿಯ ದರ್ಶನ ಸಮಯ ಬದಲಾವಣೆ...!

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮುಂಜುನಾಥ ಸ್ವಾಮಿಯ ದರ್ಶನ ಸಮಯ ಬದಲಾವಣೆ…!

spot_img
- Advertisement -
- Advertisement -

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಮುಂಜುನಾಥ ಸ್ವಾಮಿಯ ದರ್ಶನ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.

ದೀಪಾವಳಿ ಬಳಿಕ ನ. 4ರಿಂದ ರಂಗಪೂಜೆ, ಬೆಳ್ಳಿ ರಥೋತ್ಸವ, ಪಲ್ಲಕ್ಕಿ ಉತ್ಸವ ಮೊದಲಾದ ವಿಶೇಷ ಪೂಜೆ, ಉತ್ಸವಾದಿ ಸೇವೆಗಳು ನಡೆಯುವ ಕಾರಣ ದೇವರ ದರ್ಶನಕ್ಕೆ ಸಮಯಾವಕಾಶ ಹೊಂದಿಸಲಾಗಿದೆ.

ಬೆಳಗ್ಗೆ 6ರಿಂದ ಅಪರಾಹ್ನ 2.30, ಸಂಜೆ 5ರಿಂದ ರಾತ್ರಿ 8.30ರ ವರೆಗೆ (ವಿಶೇಷ ದಿನಗಳಲ್ಲಿ ಸಮಯ ವ್ಯತ್ಯಾಸವಾಗುವ ಸಾಧ್ಯತೆಯಿದೆ). ಅನ್ನಪೂರ್ಣ ಛತ್ರದಲ್ಲಿ ಬೆಳಗ್ಗೆ 10.30ರಿಂದ 3 ಹಾಗೂ ರಾತ್ರಿ 7ರಿಂದ 9ರ ವರೆಗೆ ಭಕ್ತರಿಗೆ ಊಟದ ವ್ಯವಸ್ಥೆ ಇರಲಿದೆ.

ಬೀಡಿನಲ್ಲಿ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರನ್ನು ಬೆಳಗ್ಗೆ 9ರಿಂದ 12, ಸಂಜೆ 4ರಿಂದ 5 ಹಾಗೂ ರಾತ್ರಿ 7ರಿಂದ 9ರ ವರೆಗೆ ಭೇಟಿ ಮಾಡಬಹುದು.

ಮಂಜೂಷಾ ವಸ್ತು ಸಂಗ್ರಹಾಲಯವು ಬೆಳಗ್ಗೆ 9ರಿಂದ ಸಂಜೆ 5.30ರ ವರೆಗೆ ವೀಕ್ಷಣೆಗೆ ತೆರೆದಿರಲಿದೆ.

ಕಾರು ಮ್ಯೂಸಿಯಂ ಬೆಳಗ್ಗೆ 8.30ರಿಂದ ಅಪರಾಹ್ನ 1 ಹಾಗೂ 2ರಿಂದ 7ರ ವರೆಗೆ ತೆರೆ ದಿರುತ್ತದೆ. ಹರಕೆ ಮಂಡೆ (ಮುಡಿ ತೆಗೆಯಲು) ಬೆಳಗ್ಗೆ 6ರಿಂದ ಅಪರಾಹ್ನ 2 ಮತ್ತು ಸಂಜೆ 5ರಿಂದ 7ರ ವರೆಗೆ ತೆರೆದಿರಲಿದೆ ಎಂದು ಶ್ರೀ ಕ್ಷೇತ್ರದ ಪ್ರಕಟನೆ ತಿಳಿಸಿದೆ.

- Advertisement -
spot_img

Latest News

error: Content is protected !!