Thursday, July 16, 2026
Homeಕರಾವಳಿಕಡಬ: ಬೆಂಕಿ ಕೆನ್ನಾಲಿಗೆಗೆ ಹೊತ್ತಿ ಉರಿದ ವನ್ಯ ಸಂಪತ್ತು

ಕಡಬ: ಬೆಂಕಿ ಕೆನ್ನಾಲಿಗೆಗೆ ಹೊತ್ತಿ ಉರಿದ ವನ್ಯ ಸಂಪತ್ತು

- Advertisement -
- Advertisement -

ಕಡಬ: ಬೆಂಕಿ ಕೆನ್ನಾಲಿಗೆಗೆ ವನ್ಯ ಸಂಪತ್ತು ಹೊತ್ತಿ ಉರಿದ ಘಟನೆ ಪಂಜ ಮೀಸಲು ಮೀಸಲು ಅರಣ್ಯ ವ್ಯಾಪ್ತಿಯ ಬಲ್ಯ ಸಮೀಪದ ಕುಂತೂರು ಪದವಿನಲ್ಲಿ ನಡೆದಿದೆ.

ಏ.28 ರಂದು ಸಾಯಂಕಾಲ 3 ರ ಸುಮಾರಿಗೆ ಘಟನೆ ನಡೆದಿದ್ದು ಆಕಸ್ಮಿಕ ಬೆಂಕಿಗೆ ಕಾರಣ ತಿಳಿದು ಬಂದಿಲ್ಲ. ರಸ್ತೆ ಬದಿಯ ಸಸ್ಯ ಸಂಕುಲ ಸುಟ್ಟು ಕರಕಲಾಗಿದೆ.ಸ್ಥಳೀಯರು ಹಾಗೂ ವಾಹನ ಸವಾರರು ಬೆಂಕಿ ಕೆನ್ನಾಲೆಗೆ ಬೆಚ್ಚಿ ಬಿದ್ದಿದ್ದು ನಂದಿಸಲು ಪ್ರಯತ್ನಿಸಿದರೂ ನಿಯಂತ್ರಿಸಲು ಸಾಧ್ಯವಾಗಿಲ್ಲ. ಅಗ್ನಿ ಶಾಮಕ ದಳದ ವಾಹನ ಬರುವ ಹೊತ್ತಿಗೆ ಭಾಗಶಃ ಗಿಡ ಮರ ಹೊತ್ತಿ ಉರಿದಿದ್ದು ಅದನ್ನು ನಂದಿಸಲು ಅಗ್ನಿ ಶಾಮಕ ದಳದ ಸಿಬ್ಬಂದಿ ನಂದಿಸಿ ನಿಯಂತ್ರಣಕ್ಕೆ ತಂದಿದ್ದಾರೆ.

- Advertisement -

Latest News

error: Content is protected !!