Sunday, May 12, 2024
Homeತಾಜಾ ಸುದ್ದಿಹಾಸನ ಪೆನ್ ಡ್ರೈವ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಪ್ರಜ್ವಲ್ ಬಳಿಕ ಇದೀಗ ತಂದೆ ರೇವಣ್ಣ ವಿರುದ್ಧವೂ...

ಹಾಸನ ಪೆನ್ ಡ್ರೈವ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಪ್ರಜ್ವಲ್ ಬಳಿಕ ಇದೀಗ ತಂದೆ ರೇವಣ್ಣ ವಿರುದ್ಧವೂ ಎಫ್ ಐಆರ್

spot_img
- Advertisement -
- Advertisement -

ಹಾಸನ ಪೆನ್ ಡ್ರೈವ್ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಎಫ್‌ಐಆರ್ ದಾಖಲಾದ ಬೆನ್ನಲ್ಲೇ ಇದೀಗ  ತಂದೆ ಹೆಚ್.ಡಿ ರೇವಣ್ಣ ಅವರ ವಿರುದ್ಧವೂ ಎಫ್‌ಐಆರ್ ದಾಖಲಾಗಿದೆ.

ಇದೀಗ ರೇವಣ್ಣ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯಿಂದ ದೂರು ನೀಡಿದ್ದಾರೆ. ಭವಾನಿ ರೇವಣ್ಣ ಇಲ್ಲದ ಸಂದರ್ಭದಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದರು. ಆ ದೂರಿನ ಹಿನ್ನಲೆಯಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ವಿರುದ್ಧವೂ ಎಫ್‌ಐಆರ್ ದಾಖಲಾಗಿದೆ.

ದೂರಿನಲ್ಲಿ ಮಹಿಳೆ ದೌರ್ಜನ್ಯದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಹೊಳೆನರಸೀಪುರ ನಗರ ಠಾಣೆಯಲ್ಲಿ ಸಂತ್ರಸ್ಥ ಮಹಿಳೆ ದೂರು ನೀಡಿದ್ದು, ಎಚ್ಡಿ ರೇವಣ್ಣ ಎ1 ಹಾಗೂ ಪ್ರಜ್ವಲ್ ರೇವಣ್ಣ ಎ2 ಎಂದು ಉಲ್ಲೇಖಿಸಿದ್ದಾರೆ. ಸಂತ್ರಸ್ಥೆ ಗಂಡನಿಗೆ ತಮ್ಮ ಡೈರಿಯಲ್ಲಿ ರೇವಣ್ಣ ಕೆಲಸ ಕೊಡಿಸಿದ್ದರು. ಬಳಿಕ  2015 ರಲ್ಲಿ ಹಾಸ್ಟೆಲ್ ಒಂದರಲ್ಲಿ ಅಡುಗೆ ಕೆಲಸಕ್ಕೆ ರೇವಣ್ಣ ಮಹಿಳೆಯನ್ನು ಸೇರಿಸಿದ್ದರು. ನಂತರ ತಮ್ಮ ಮನೆಯಲ್ಲಿ ಅಡುಗೆ ಕೆಲಸಕ್ಕೆ ಬರುವಂತೆ ರೇವಣ್ಣ ಹೇಳಿದ್ದರು.

ಅಡುಗೆ ಕೆಲಸಕ್ಕೆ ಸೇರಿಕೊಂಡ ಬಳಿಕ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ.

ಭವಾನಿ ರೇವಣ್ಣ ಮನೆಯಲ್ಲಿ ಇಲ್ಲದ ವೇಳೆಯಲ್ಲಿ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. ಪ್ರಜ್ವಲ್ ಕೂಡ ಅಡುಗೆ ಮನೆಯಲ್ಲಿ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡುತ್ತಿದ್ದರು ಎಂದು ಮಹಿಳೆ ಹೇಳಿದ್ದಾರೆ. ಅಲ್ಲದೇ ಪ್ರಜ್ವಲ್ ಸಂತ್ರಸ್ಥೆಯ ಮಗಳಿಗೂ ವೀಡಿಯೋ ಕಾಲ್ ಮಾಡಿ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.ಬಳಿಕ

ಕಿರುಕುಳ ತಡೆಯಲಾರದೆ  ಪ್ರಜ್ವಲ್ ನಂಬರ್ ಬ್ಲಾಕ್ ಮಾಡಿದ್ದಳಂತೆ ಸಂತ್ರಸ್ಥೆ ಪುತ್ರಿ.ಕಿರುಕುಳ ಹೆಚ್ಚಾದಾಗ ಸಂತ್ರಸ್ಥೆ ಕೆಲಸ ಬಿಟ್ಟು ಹೋಗಿದ್ದಾಗಿ ಹೇಳಿದ್ದಾರೆ.ಇದೀಗ ವೀಡಿಯೋ ವೈರಲ್ ಆದ ಬೆನ್ನಲ್ಲೇ ಆತಂಕಗೊಂಡು ಮಹಿಳೆ ದೂರು ಕೊಟ್ಟಿದ್ದಾರೆ.

- Advertisement -
spot_img

Latest News

error: Content is protected !!