Thursday, June 4, 2026
Homeಕರಾವಳಿಬೆಳ್ತಂಗಡಿ; ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ ಕಳ್ಳತನ

ಬೆಳ್ತಂಗಡಿ; ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ ಕಳ್ಳತನ

- Advertisement -
- Advertisement -

ಬೆಳ್ತಂಗಡಿ; ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ ಕಳ್ಳತನ ಮಾಡಿರುವ ಘಟನೆ ಗರ್ಡಾಡಿ  ಗ್ರಾಮದಲ್ಲಿ ನಡೆದಿದೆ.

ಇಲ್ಲಿನ ನಿವಾಸಿ ಬಿಜುಕುರಿಯನ್‌ (52) ಎಂಬವರು ದಿನಾಂಕ  28.04.2024 ರಂದು  ಬೆಳಿಗ್ಗೆ,  ಮನೆಗೆ ಬೀಗ ಹಾಕಿ, ಪತ್ನಿ  ಮತ್ತು  ಅವರ  ತಂದೆಯವರೊಂದಿಗೆ ಧಾರ್ಮಿಕ‌ ಸ್ಥಳಕ್ಕೆ ತೆರಳಿದ್ದರು. ಕೆಲಹೊತ್ತಿನ ಬಳಿಕ ಹಿಂತಿರುಗಿ ಮನೆಗೆ ಬಂದು  ನೋಡಿದಾಗ, ಮನೆಯ  ಎದುರಿನ  ಬಾಗಿಲು ತೆರೆದಿದ್ದು, ಮನೆಯೊಳಗೆ ಹೋಗಿ ನೋಡಿದಾಗ, ಯಾರೋ  ಕಳ್ಳರು  ಅವರ ಮನೆಯ  ಬಾಗಿಲಿನ ಬೀಗ  ಮುರಿದು  ಒಳಪ್ರವೇಶಿಸಿ, ಒಟ್ಟು ಮೌಲ್ಯ ರೂ  29000/- ಬೆಲೆಬಾಳುವ   ಚಿನ್ನಾಭರಣ  ಹಾಗೂ  ನಗದು  ರೂ  28000/- ಕಳವು ಮಾಡಿರುವುದು ತಿಳಿದುಬಂದಿದ್ದು,  ಕಳವು ಮಾಡಿದ  ಒಟ್ಟು ಮೌಲ್ಯ  ರೂ  57000/- ಆಗಿರುತ್ತದೆ ಎಂಬುದಾಗಿ ಅವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!