Wednesday, June 24, 2026
Homeಇತರವಿಶ್ವಕಪ್ ಸೋಲಿನಿಂದ ಹೃದಯಾಘಾತವಾಗಿ ಮೃತಪಟ್ಟ ಅಭಿಮಾನಿ

ವಿಶ್ವಕಪ್ ಸೋಲಿನಿಂದ ಹೃದಯಾಘಾತವಾಗಿ ಮೃತಪಟ್ಟ ಅಭಿಮಾನಿ

- Advertisement -
- Advertisement -

ತಿರುಪತಿ: ಭಾರತ ವಿಶ್ವಕಪ್ ಫೈನಲ್ ನಲ್ಲಿ ಸೋತ ಕಾರಣ ನಿರಾಸೆಗೊಂಡ ಓರ್ವ ಅಭಿಮಾನಿಯೊಬ್ಬರು ಟಿವಿ ನೋಡುತ್ತಿದ್ದಾಗಲೇ ಪ್ರಾಣ ಹೋಗಿರುವ ಘಟನೆ ತಿರುಪತಿಯಲ್ಲಿ ನಡೆದಿದೆ.

ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಜ್ಯೋತಿಶ್ ಕುಮಾರ್ ಯಾದವ್ (35) ಮೃತಪಟ್ಟ ವ್ಯಕ್ತಿ. ಅವರು ದೀಪಾವಳಿ ರಜೆಯ ಪ್ರಯುಕ್ತ ತಿರುಪತಿಗೆ ಬಂದಿದ್ದರು. ಕ್ರಿಕೆಟ್ ಅಭಿಮಾನಿಯಾಗಿದ್ದ ಜ್ಯೋತಿಶ್ ಭಾರತ– ಆಸೀಸ್ ನಡುವಿನ ವಿಶ್ವಕಪ್ ಫೈನಲ್ ಪಂದ್ಯ ಗೆಲುವಿನ ನಿರೀಕ್ಷೆಯಲ್ಲಿದ್ದರು. ಆದರೆ ಪಂದ್ಯ ಭಾರತ ಸೋಲಿನ ಹಂತಕ್ಕೆ ಬಂದಾಗ, ಟಿವಿ ನೋಡುತ್ತಿದ್ದ ಜ್ಯೋತಿಶ್ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ.

ಜ್ಯೋತಿಶ್ ಅವರನ್ನು ಕೂಡಲೇ ಹತ್ತಿರದ ತಿರುಪತಿಯ ಸರ್ಕಾರಿ ಜನರಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಅವರು ಹೃದಯಾಘಾತವಾಗಿ ಆದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಹೇಳಿರುವುದಾಗಿ ಮಾಹಿತಿ ದೊರಕಿದೆ ಎನ್ನಲಾಗಿದೆ.

- Advertisement -

Latest News

error: Content is protected !!