Monday, July 13, 2026
Homeತಾಜಾ ಸುದ್ದಿದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಶರ್ಮಿಳಾ ಮಾಂಡ್ರೆ: ಖ್ಯಾತ ತಮಿಳು ನಿರ್ಮಾಪಕನ ಕೈಹಿಡಿದ ಸ್ಯಾಂಡಲ್‌ವುಡ್ ಸುಂದರಿ!

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಶರ್ಮಿಳಾ ಮಾಂಡ್ರೆ: ಖ್ಯಾತ ತಮಿಳು ನಿರ್ಮಾಪಕನ ಕೈಹಿಡಿದ ಸ್ಯಾಂಡಲ್‌ವುಡ್ ಸುಂದರಿ!

- Advertisement -
- Advertisement -

ಖ್ಯಾತ ಸ್ಯಾಂಡಲ್‌ವುಡ್ ನಟಿ ಶರ್ಮಿಳಾ ಮಾಂಡ್ರೆ ಅವರು ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕ ಸುಧನ್ ಸುಂದರಂ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಜೂನ್ 25 ರಂದು ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ, ಇದೀಗ ವೈವಾಹಿಕ ಜೀವನಕ್ಕೆ ಅಧಿಕೃತವಾಗಿ ಲಗ್ಗೆ ಇಟ್ಟಿದೆ.

ಇನ್ನು ಇತ್ತೀಚೆಗೆ ನಡೆದ ಮದುವೆ ಪೂರ್ವ ಕಾರ್ಯಕ್ರಮಗಳಲ್ಲಿ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ಸಂಭ್ರಮಿಸಿದ್ದರು.

ನಟಿ ಶರ್ಮಿಳಾ ಮಾಂಡ್ರೆ ಅವರ ಕೈಹಿಡಿದಿರುವ ಸುಧನ್ ಸುಂದರಂ ಅವರು ಕಾಲಿವುಡ್‌ನ ಪ್ರಸಿದ್ಧ ನಿರ್ಮಾಪಕರಾಗಿದ್ದು, ಇತ್ತೀಚಿನ ಸೂಪರ್ ಹಿಟ್ ಸಿನಿಮಾ ‘ಮಹಾರಾಜಾ’ ಸೇರಿದಂತೆ ಹಲವು ಚಿತ್ರಗಳನ್ನು ನಿರ್ಮಿಸಿದ್ದಾರೆ. ಸದ್ಯ ಮದುವೆಯ ಅಧಿಕೃತ ಫೋಟೋಗಳಿಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

- Advertisement -

Latest News

error: Content is protected !!