- Advertisement -


- Advertisement -
ಕುರುಕಲು ತಿಂಡಿಯ ಪೊಟ್ಟಣದಲ್ಲಿದ್ದ ಆಟಿಕೆಯನ್ನು ನುಂಗಿದ ನಾಲ್ಕು ವರ್ಷದ ಮಗು ಮೃತಪಟ್ಟಿರುವ ದಾರುಣ ಘಟನೆ ಚನ್ನಗಿರಿ ಪಟ್ಟಣದ ಕೌಸರ್ ಮಸೀದಿ ಏರಿಯಾದಲ್ಲಿ ನಡೆದಿದೆ.
ಮೃತ ಮಗುವನ್ನು ಅಲಿಯಾ ಶೇಕ್ (4 ವರ್ಷ, 4 ತಿಂಗಳು) ಎಂದು ಗುರುತಿಸಲಾಗಿದೆ. ಮನೆಯ ಪಕ್ಕದ ಅಂಗಡಿಯಿಂದ ಕುರುಕಲು ತಿಂಡಿ ಖರೀದಿಸಿ ತಿನ್ನುತ್ತಿದ್ದ ವೇಳೆ ಅದರೊಂದಿಗೆ ಇದ್ದ ಆಟಿಕೆಯನ್ನು ಮಗು ಆಕಸ್ಮಿಕವಾಗಿ ನುಂಗಿದೆ. ಇದರಿಂದ ಮಗು ಅಸ್ವಸ್ಥಗೊಂಡಿದೆ.
ಕೂಡಲೇ ಪೋಷಕರು ಮಗುವನ್ನು ತಾಲೂಕು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಮನೆಗೆ ಕರೆತಂದಾಗ ಮತ್ತೆ ಅಸ್ವಸ್ಥಗೊಂಡ ಮಗು ಮೃತಪಟ್ಟಿದೆ. ಈ ಘಟನೆ ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
- Advertisement -


