
ಮಂಗಳೂರು: ಮಂಗಳೂರು ನಗರದ ನೆಹರು ಮೈದಾನದ ಬಳಿ ಅಕ್ರಮವಾಗಿ ವನ್ಯಜೀವಿಯಾದ ಜಿಂಕೆಯ ಕೊಂಬುಗಳನ್ನು ವಶದಲ್ಲಿಟ್ಟುಕೊಂಡು ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಮಂಗಳೂರು ಸಿಐಡಿ ಅರಣ್ಯ ಸಂಚಾರ ದಳದ ಅಧಿಕಾರಿಗಳು(FMS) ಖಚಿತ ಮಾಹಿತಿ ಮೇರೆಗೆ ನ.24 ರಂದು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.
ಆರೋಪಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಸಿದ್ದರಹಳ್ಳಿ ನಿವಾಸಿ ಕಿರಣ್ (23) ಎಂಬಾತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ವೇಳೆ ಆತನ ಬಳಿಯಿದ್ದ ಮೂರು ಜಿಂಕೆ ಕೊಂಬುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡು.ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಅರಣ್ಯ ಸಂಚಾರ ದಳದ ಅಧಿಕಾರಿಗಳು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ(FMS) ಪೊಲೀಸ್ ಅಧೀಕ್ಷಕರಾದ ಪವನ್ ನೆಜ್ಜೂರು, ಐಪಿಎಸ್ ಅವರ ಮಾರ್ಗದರ್ಶನದಲ್ಲಿ ಮಂಗಳೂರು ಸಿಐಡಿ ಅರಣ್ಯ ಸಂಚಾರಿ ದಳದ(FMS) ಪಿಎಸ್ಐ ದಿಲೀಪ್ ಜಿ.ಆರ್ ಹಾಗೂ ಸಿಬ್ಬಂದಿ ಜಯರಾಮ.ಕೆ.ಟಿ, ತಾರಾನಾಥ್.ಎಸ್, ಬಾಲಕೃಷ್ಣ.ಕೆ.ಎಮ್, ಇರ್ಷಾದ್ ಪಡಂಗಡಿ, ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.


