- Advertisement -


- Advertisement -
ರಾಮನಗರ: ಯಾವುದೇ ಆಡಂಬರಗಳಿಲ್ಲದೆ, ರಾಷ್ಟ್ರಕವಿ ಕುವೆಂಪು ಅವರ ಆಶಯದ ಮಂತ್ರಮಾಂಗಲ್ಯ ಪದ್ಧತಿಯನ್ನು ಅನುಸರಿಸಿ ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ್ ಮತ್ತು ವೈದ್ಯೆ ಡಾ. ಶ್ರೀನಿಧಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ರಾಮನಗರದ ಜಾನಪದ ಲೋಕದಲ್ಲಿ ಗುರುವಾರ ಇವರ ವಿವಾಹವು ಅತ್ಯಂತ ಸರಳವಾಗಿ ನೆರವೇರಿದೆ. ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ, ಎರಡೂ ಕುಟುಂಬಗಳ ಸಮ್ಮತಿಯೊಂದಿಗೆ ಮಂತ್ರಮಾಂಗಲ್ಯದ ಮೂಲಕ ಸತಿಪತಿಗಳಾದರು.
ಮಾಜಿ ಸಂಸದ ದಿವಂಗತ ಆರ್. ಧ್ರುವನಾರಾಯಣ ಅವರ ಪುತ್ರರಾಗಿರುವ ದರ್ಶನ್ ಧ್ರುವನಾರಾಯಣ್, ಶಾಸಕರಾಗಿದ್ದರೂ ಅದ್ಧೂರಿತನಕ್ಕೆ ಮೊರೆಹೋಗದೆ ಸರಳ ವಿವಾಹವಾಗುವ ಮೂಲಕ ಮಾದರಿಯಾಗಿದ್ದಾರೆ. ನವದಂಪತಿಯ ಈ ನಿರ್ಧಾರಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
- Advertisement -


