Thursday, November 26, 2026
Homeಆರಾಧನಾತಿರುಮಲ ತಿಮ್ಮಪ್ಪನಿಗೆ 121 ಕೆಜಿ ಚಿನ್ನಾಭರಣ ಕಾಣಿಕೆ ನೀಡಿದ ಉದ್ಯಮಿ

ತಿರುಮಲ ತಿಮ್ಮಪ್ಪನಿಗೆ 121 ಕೆಜಿ ಚಿನ್ನಾಭರಣ ಕಾಣಿಕೆ ನೀಡಿದ ಉದ್ಯಮಿ

- Advertisement -
- Advertisement -

ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಗೆ ಚೆನ್ನೈ ಮೂಲದ ಉದ್ಯಮಿ ವರ್ಧಮಾನ್ ಜೈನ್ ಅವರು 121 ಕೆಜಿ ತೂಕದ ಚಿನ್ನಾಭರಣಗಳನ್ನು ಕಾಣಿಕೆಯಾಗಿ ನೀಡಿದ್ದಾರೆ. ಈ ಆಭರಣಗಳ ಮೌಲ್ಯ ಸುಮಾರು 161ರಿಂದ 206 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಸಮ್ಮುಖದಲ್ಲಿ ಉದ್ಯಮಿ ಈ ಆಭರಣಗಳನ್ನು ತಿರುಮಲ ತಿರುಪತಿ ದೇವಸ್ಥಾನದ (TTD) ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಚೆನ್ನೈನ ಜಿಆರ್‌ಟಿ ಜ್ಯುವೆಲರ್ಸ್ ಸಂಸ್ಥೆಯ ಕುಶಲಕರ್ಮಿಗಳು ಸುಮಾರು 15 ತಿಂಗಳ ಕಾಲ ಶ್ರಮಿಸಿ ಈ ಆಭರಣಗಳನ್ನು ತಯಾರಿಸಿದ್ದಾರೆ. ಒಟ್ಟು 9 ಸೆಟ್‌ಗಳಲ್ಲಿ 40ರಿಂದ 45 ಬಗೆಯ ಆಭರಣಗಳನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ ಕಿರೀಟ, ಪದ್ಮಪಾದಗಳು, ವಡ್ಡಾಣಂ, ಕಂಠಹಾರ, ಶಂಖು-ಚಕ್ರ ಸೇರಿದಂತೆ ಹಲವು ಆಭರಣಗಳಿವೆ.

ಶುಕ್ರವಾರ ನಡೆಯುವ ಅಭಿಷೇಕದ ಬಳಿಕ ಈ ಹೊಸ ಆಭರಣಗಳಿಂದ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ.

ಇತ್ತೀಚೆಗೆ ತಮ್ಮ ಕಂಪನಿಯ ಶೇ.60ರಷ್ಟು ಷೇರುಗಳನ್ನು ಮಾರಾಟ ಮಾಡಿ ಸುಮಾರು 6,000 ಕೋಟಿ ರೂ. ಗಳಿಸಿದ್ದ ವರ್ಧಮಾನ್ ಜೈನ್, ತಮ್ಮ ಸಂಪತ್ತಿನ ಒಂದು ಭಾಗವನ್ನು ದೇವರಿಗೆ ಕಾಣಿಕೆಯಾಗಿ ನೀಡಲು ನಿರ್ಧರಿಸಿದ್ದರು. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಉದ್ಯಮಿಯ ಈ ಕೊಡುಗೆಯನ್ನು ಶ್ಲಾಘಿಸಿದ್ದಾರೆ.

- Advertisement -

Latest News

error: Content is protected !!