- Advertisement -


- Advertisement -
ಮಂಗಳೂರಿ; ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ಎರಡು ಬೇರೆ ಬೇರೆ ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಳಗಳಲ್ಲಿ ಇಂದು ಒಟ್ಟು 11 ಬಾಂಗ್ಲಾದೇಶಿ ಪ್ರಜೆಗಳನ್ನು ವಶಕ್ಕೆ ಪಡೆಯಲಾಗಿದೆ.
ಇವರನ್ನು ವಶದಲ್ಲಿಟ್ಟುಕೊಂಡು ಮರಳಿ ಸ್ವದೇಶಕ್ಕೆ ಗಡಿಪಾರು ಮಾಡಲು ಆದೇಶ ಹೊರಡಿಸುವಂತೆ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಗೆ ವರದಿಯನ್ನು ಕಳುಹಿಸಲಾಗುವುದು. ಸದ್ಯ ಇವರ ದಾಖಲೆಗಳ ಸಂಗ್ರಹಣೆ ಕಾರ್ಯ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಭಾರತದ ಇತರ ರಾಜ್ಯಗಳ ಕಾರ್ಮಿಕರ ಜೊತೆಗೆ ಇವರನ್ನು ಇಲ್ಲಿಗೆ ಕೆಲಸಕ್ಕೆ ಕರೆತಂದಿದ್ದ ಪಶ್ಚಿಮ ಬಂಗಾಳ ಮೂಲದ ಮಧ್ಯವರ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗುವುದು.ಪ್ರಕರಣ ದಾಖಲಾದ ನಂತರ ಪ್ರಕರಣದ ಸಂಪೂರ್ಣ ವಿವರಗಳನ್ನು ಹಂಚಿಕೊಳ್ಳಲಾಗುವುದು ಪೊಲೀಸ್ ಮೂಲಗಳು ತಿಳಸಿವೆ.
- Advertisement -


