- Advertisement -
- Advertisement -
ಮಂಗಳೂರು: ಇಲ್ಲಿನ ಅಶೋಕನಗರದಲ್ಲಿ ಕೋಡಿಕಲ್ ಹೋಗುವ ರಸ್ತೆಯ ಬಳಿಯ ಪಾಳು ಬಿದ್ದ ಬಾವಿಯೊಂದರಲ್ಲಿದ್ದ ಎರಡು ಹೆಬ್ಬಾವುಗಳನ್ನು ಉರಗಪ್ರೇಮಿಗಳ ತಂಡ ರಕ್ಷಣೆ ಮಾಡಿದೆ.
ಉರಗಪ್ರೇಮಿ ಭುವನ್ ‘ಕಾರ್ಮಿಕರು ಅಶೋಕ ನಗರದ ಪಾಳು ಬಾವಿಯನ್ನು ಮುಚ್ಚಿ ಕಟ್ಟಡ ನಿರ್ಮಿಸುವ ಸಿದ್ಧತೆಯಲ್ಲಿ ತೊಡಗಿದ್ದು, ಈ ಸಂದರ್ಭದಲ್ಲಿ ಬಾವಿಯಲ್ಲಿ ಹೆಬ್ಬಾವು ಇರುವುದನ್ನು ನೋಡಿ ನಮ್ಮ ಗಮನಕ್ಕೆ ತಂದಿದ್ದರು. ನಾವು ಸ್ಥಳಕ್ಕೆ ಹೋಗಿ ನೋಡಿದಾಗ, ಬಾವಿಯೊಳಗೆ ಮೂರು ಹೆಬ್ಬಾವುಗಳಿರುವುದು ಕಂಡು ಬಂತು. ನಾನು, ಜೀತ್ ಮಿಲನ್ ಹಾಗೂ ಅಜಯ್ ಕುಲಾಲ್ ಸೇರಿ ಎರಡು ಹೆಬ್ಬಾವುಗಳನ್ನು ಶನಿವಾರ ಸಂರಕ್ಷಣೆ ಮಾಡಿದ್ದೇವೆ’ ಎಂದು ತಿಳಿಸಿದ್ದಾರೆ.
ಇನ್ನು ರಕ್ಷಣೆ ಮಾಡಿರುವ ಎರಡು ಹೆಬ್ಬಾವುಗಳಲ್ಲಿ ಒಂದು ಹೆಬ್ಬಾವು 8.5 ಅಡಿ ಹಾಗೂ ಇನ್ನೊಂದು 7.5 ಅಡಿ ಉದ್ದವಿತ್ತು. ಎರಡೂ ಹಾವುಗಳನ್ನು ಕಾಡಿಗೆ ಬಿಟ್ಟಿದ್ದೇವೆ. ಬಾವಿಯಲ್ಲಿ ಇನ್ನೂ ಒಂದು ಹೆಬ್ಬಾವು ಉಳಿದುಕೊಂಡಿದೆ. ಕಾಣಸಿಕ್ಕರೆ ಅದನ್ನು ಸಂರಕ್ಷಣೆ ಮಾಡುತ್ತೇವೆ ಎಂದರು.
- Advertisement -