- Advertisement -
- Advertisement -
ಕಡಬ: ಕುಟುಂಬವೊಂದು ಕಾರ್ಯಕ್ರಮದ ನಿಮಿತ್ತ ಧರ್ಮಸ್ಥಳಕ್ಕೆ ತೆರಳುತ್ತಿದ್ದಾಗ ಕಡಬ-ಪಂಜ ರಸ್ತೆಯ ಕೋಡಿಂಬಾಳ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬೊಲೆರೋ ವಾಹನವು ವಿದ್ಯುತ್ ಕಂಬಕ್ಕೆ ಢಿಕ್ಕಿಯಾದ ಘಟನೆ ಮುಂಜಾನೆ ಸಂಭವಿಸಿದೆ.
ಅಪಘಾತದಲ್ಲಿ ವಾಹನದಲ್ಲಿದ್ದ ಪ್ರಯಾಣಿಕರು ಪವಾಡ ಸದೃಶವಾಗಿ ಪಾರಾಗಿದ್ದಾರೆ. ಸುಳ್ಯ ತಾಲೂಕಿನ ಕಲ್ಲುಗುಂಡಿಯ ಚೇತನ್ ಎಂಬವರ ಕುಟುಂಬಸ್ಥರು ಕಾರ್ಯಕ್ರಮದ ನಿಮಿತ್ತ ಧರ್ಮಸ್ಥಳಕ್ಕೆ ತೆರಳುತ್ತಿದ್ದಾಗ ಕೋಡಿಂಬಾಳದಲ್ಲಿ ವಾಹನ ಅಪಘಾತವಾಗಿದೆ. ವಾಹನದಲ್ಲಿ ಮಗು ಸಹಿತ ಮೂರು ಮಂದಿಯಿದ್ದು ಜೀವ ಹಾನಿಯಿಂದ ಪಾರಾಗಿದ್ದಾರೆ ಎನ್ನಲಾಗಿದೆ.
ಇನ್ನು ಬೊಲೆರೋ ವಾಹನವು ಜಖಂಗೊಂಡಿದ್ದು ಅಪಘಾತದ ರಭಸಕ್ಕೆ ವಿದ್ಯುತ್ ಕಂಬ ಮುರಿದು ಬಿದ್ದಿದೆ. ಸ್ಥಳೀಯರು ಕೂಡಲೇ ಘಟನೆ ನಡೆದ ಸ್ಥಳಕ್ಕೆ ಆಗಮಿಸಿ ವಾಹನದಲ್ಲಿದ್ದವರನ್ನು ಉಪಚರಿಸಿದ್ದಾರೆ ಎನ್ಬಲಾಗಿದೆ..
- Advertisement -