Wednesday, December 6, 2023
Homeಕರಾವಳಿರಾಧಿಕಾ ಕಾಸರಗೋಡು ಮೇಲೆ ಬೆಳ್ತಂಗಡಿಯಲ್ಲಿ ಕೇಸ್ ಪ್ರಕರಣ: ಬೆಳ್ತಂಗಡಿ ಪೊಲೀಸರಿಗೆ ಫೇಸ್ ಬುಕ್ ನಲ್ಲಿ ಓಪನ್...

ರಾಧಿಕಾ ಕಾಸರಗೋಡು ಮೇಲೆ ಬೆಳ್ತಂಗಡಿಯಲ್ಲಿ ಕೇಸ್ ಪ್ರಕರಣ: ಬೆಳ್ತಂಗಡಿ ಪೊಲೀಸರಿಗೆ ಫೇಸ್ ಬುಕ್ ನಲ್ಲಿ ಓಪನ್ ಚಾಲೇಂಜ್ ಹಾಕಿದ ರಾಧಿಕಾ

- Advertisement -
- Advertisement -

ಬೆಳ್ತಂಗಡಿ : ಜೈನ ಧರ್ಮದ ಬಗ್ಗೆ ಗಿರೀಶ್ ಮಟ್ಟಣ್ಣನವರು ಯೂಟ್ಯೂಬ್ ನಲ್ಲಿ ಸಂದರ್ಶನ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ ಪ್ರಕರಣ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಮತ್ತು ಅವರ ಕುಟುಂಬದ ಬಗ್ಗೆ  ಅವಹೇಳಕಾರಿಯಾಗಿ ಬರಹ ಬರೆದ ರಾಧಿಕಾ ಕಾಸರಗೋಡು ಯಾನೆ ಅನಿತಾ ಕಾಸರಗೋಡು ಮತ್ತು ಗಿರೀಶ್ ಮಟ್ಟಣ್ಣನವರ ಮೇಲೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ನ.18 ರಂದು ಸಂಜೆ ಪ್ರಕರಣ ದಾಖಲಾಗಿದೆ. ಈ ಬಗ್ಗೆ ನ.19 ರಂದು ಬೆಳ್ತಂಗಡಿ ಪೊಲೀಸರಿಗೆ ರಾಧಿಕಾ ಕಾಸರಗೋಡು ಯಾನೆ ಅನಿತಾ ಕಾಸರಗೋಡು ಫೇಸ್ ಬುಕ್ ನಲ್ಲಿ ಪೋಸ್ಟ್ ಮೂಲಕ ಓಪನ್ ಛಾಲೆಂಜ್‌ ಹಾಕಿದ್ದಾರೆ.

ರಾಧಿಕಾ ಯಾನೆ ಅನಿತಾ ಕಾಸರಗೋಡು ಫೇಸ್ ಬುಕ್ ಪೋಸ್ಟ್ ವಿವರಗಳು:

ಫೇಸ್ ಬುಕ್ ಪೋಸ್ಟ್ -1: ಧಮ್ ಇದ್ರೆ ಕಾಲ್ ಮಾಡ್ರೋ ಬೆಳ್ತಂಗಡಿ  ಪೊಲೀಸ್ ಸ್ಟೇಷನ್ ನವರು…ಪೊಲೀಸ್ ಇಲಾಖೆ ಇವನ ಅಪ್ಪಂದಾ..ಪೆರ್ಗುಡೆಯದ್ದು..

ಫೇಸ್ ಬುಕ್ ಪೋಸ್ಟ್-2:ಬೆಳ್ತಂಗಡಿ ಪೊಲೀಸ್ ಸ್ಟೇಷನ್ ಕಾಮಾಂಧರಿಗೆ ಮಾರಾಟವಾಗಿದೆ.ಎಷ್ಟು ದೊಡ್ಡ  ಪೆರ್ಗುಡೆಯ ಆಟ ನನ್ನಲ್ಲಿ ನಡೆಯಲ್ಲ…ನಾವು ಬ್ರಾಹ್ಮಣರು ಅವನು ಜೈನ..ಬ್ರಾಹ್ಮಣರಿಗೆ ಮಾಡಿದ ಪಾಪ ಪರಿಹಾರಕ್ಕಾಗಿ ಬ್ರಾಹ್ಮಣರ ಆರಾಧನೆ ಮಾಡ್ತಾರೆ…ಧರ್ಮಸ್ಥಳ ದಿಂದ ನಿಮ್ಮನ್ನು ಒದ್ದು ಹೊರಗೆ ಹಾಕುವ ಸಮಯ ಸನ್ನಿಹತವಾಗಿದೆ…ಅದಕ್ಕೆ ನಿಮ್ಮ ಹಾರಾಟ… ಎಂದು ಎರಡು ಪೋಸ್ಟ್ ಮಾಡಿದ್ದಾರೆ.

ಇನ್ನೂ ಈ ಗಂಭೀರವಾಗಿ ಬೆಳ್ತಂಗಡಿ ಪೊಲೀಸರಿಗೆ ಓಪನ್ ಅಗಿ ಫೇಸ್ ಬುಕ್ ನಲ್ಲಿ ಚಾಲೆಂಜ್ ಹಾಕಿದ ಪ್ರಕರಣವನ್ನು ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಾಗಿದೆ.

- Advertisement -
spot_img

Latest News

error: Content is protected !!