Sunday, April 28, 2024
Homeಇತರಟಿಕ್ ಟಾಕ್ ಪ್ರಿಯರಿಗೆ ಕೊನೆಗೂ ಸಿಕ್ತು ಗುಡ್ ನ್ಯೂಸ್

ಟಿಕ್ ಟಾಕ್ ಪ್ರಿಯರಿಗೆ ಕೊನೆಗೂ ಸಿಕ್ತು ಗುಡ್ ನ್ಯೂಸ್

spot_img
- Advertisement -
- Advertisement -

ಟಿಕ್ ಟಾಕ್ ಪ್ರಿಯರಿಗೆ ಕೊನೆಗೂ ಸಿಕ್ತು ಗುಡ್ ನ್ಯೂಸ್

ನವದೆಹಲಿ : ಮೊನ್ನೆಯಷ್ಟೇ ಕೇಂದ್ರ ಸರ್ಕಾರ ಟಿಕ್ ಟಾಕ್ ಸೇರಿದಂತೆ 59 ಚೀನೀ ಆ್ಯಪ್ ಗಳನ್ನು ಭಾರತದಲ್ಲಿ ಬ್ಯಾನ್ ಮಾಡಿತ್ತು. ಇದು ಟಿಕ್ ಟಾಕ್ ಪ್ರಿಯರಿಗೆ ಅತ್ಯಂತ ಬೇಸರ ಮೂಡಿಸಿತ್ತು. ಅಯ್ಯೋ! ಟಿಕ್ ಟಾಕ್ ಗೆ  ಪರ್ಯಾಯವಾಗಿ ಯಾವುದಾದರೂ ಆ್ಯಪ್ ಬರಬಾರದಾ ಅಂತಾ ಮನಸ್ಸೇ ಬೈದುಕೊಳ್ಳುತ್ತಿದ್ದರು. ಇಂತಹ ಮಂದಿಗೆ ಶುಭ ಸುದ್ದಿಯೊಂದು ಸಿಕ್ಕಿದೆ.

ಇದೀಗ ಫೇಸ್ ಬುಕ್ ಮತ್ತು ಇನ್ ಸ್ಟಾಗ್ರಾಂ ಕೂಡ ತನ್ನ ಬಳಕೆದಾರರಿಗೆ ಟಿಕ್ ಟಾಕ್ ಮಾದರಿಯ ವಿಡಿಯೋ ರಚಿಸಲು ಅನುವು ಮಾಡಿಕೊಡುವ ಫೀಚರ್ ಒಂದನ್ನು ಬಳಕೆಗೆ ತರಲು ಚಿಂತಿಸಿದೆ ಎಂದು ವರದಿ ತಿಳಿಸಿದೆ.  ಈ ಫೀಚರ್ 15 ಸೆಕೆಂಡ್ ಗಳ ವಿಡಿಯೋ ರಚಿಸಲು ನೆರವಾಗುವಂತೆ ಯೋಜನೆ ರೂಪಿಸಲಾಗುತ್ತಿದೆ. ಅಪ್ ಡೇಟ್ ವರ್ಷನ್ ಅನ್ನು ಹಲವು ದೇಶಗಳಲ್ಲಿ ಜಾರಿಗೆ ತರಲಾಗುವುದು. ಜನರಿಗೆ ತಮ್ಮ ಭಾವನೆ ವ್ಯಕ್ತಪಡಿಸಲು  ಮತ್ತು ಮನರಂಜನೆ ನೀಡಲು ಈ ಫೀಚರ್ ಬಹಳ ನೆರವಾಗುತ್ತದೆ ಎಂದು ಫೇಸ್ ಬುಕ್ ಮೂಲದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಹೊಸ ಫೀಚರ್ ಅನ್ನು ಜನರಿಗೆ ಪರಿಚಯಿಸಲು  ಬಹಳ ಉತ್ಸುಕರಾಗಿದ್ದು, ಆದರೇ ಯಾವಾಗ ಜಾರಿಗೆ ಬರುತ್ತದೆ ಎಂಬುದಕ್ಕೆ ಯಾವುದೇ ಯೋಜನೆ ರೂಪಿಸಿಲ್ಲ ಎಂದು ಅವರು ತಿಳಿಸಿದ್ದಾರೆ. ಹಾಗಾಗಿ ಅದು ಬರೋವರೆಗೂ ಟಿಕ್ ಟಾಕ್ ಪ್ರಿಯರು ಕಾಯಲೇ ಬೇಕು.

ಭಾರತದಲ್ಲಿ ಟಿಕ್ ಟಾಕ್ ಬ್ಯಾನ್ ಆದ ನಂತರ ಚಿಂಗಾರಿ, ರೋಪೊಸೋ ಮೊದಲ ಆ್ಯಪ್ ಗಳು  ಭಾರೀ ಡೌನ್ ಲೋಡ್ ಕಂಡಿದ್ದವು. ಅದಕ್ಕೂ ಮೊದಲು ಭಾರತದಲ್ಲಿ ಟಿಕ್ ಟಾಕ್  200 ಮಿಲಿಯನ್ ಜನರು ಸಕ್ರೀಯವಾಗಿ ಬಳಸುತ್ತಿದ್ದರು. ಸದ್ಯ ಭಾರತದಲ್ಲಿ ಈ ಫೀಚರ್ ಕೆಲವೇ ಬಳಕೆದಾರರಿಗೆ ಲಭ್ಯವಿದೆ. ಇದರಲ್ಲಿ 15 ಸೆಕೆಂಡುಗಳ ವಿಡಿಯೋ ಮಾಡಬಹುದಾಗಿದ್ದು ಟಿಕ್ ಟಾಕ್ ನಲ್ಲಿರುವಂತೆ ಎಡಿಟಿಂಗ್ ಸೌಲಭ್ಯಗಳಿರುತ್ತವೆ. ಮಾತ್ರವಲ್ಲದೆ ಇತರರಿಗೂ ಕಾಣುವಂತೆ ಪೋಸ್ಟ್ ಶೇರ್ ಮಾಡುವ ಅವಕಾಶವಿದೆ.  ಆದರೇ ಈ ಫೀಚರ್ ಇನ್ನು ಅಧಿಕೃತವಾಗಿ ಬಳಕೆಗೆ ಲಭ್ಯವಾಗಿಲ್ಲ.

- Advertisement -
spot_img

Latest News

error: Content is protected !!