Wednesday, June 3, 2026
Homeಕರಾವಳಿಉಡುಪಿಕುಂದಾಪುರ: ವಿದ್ಯುತ್ ಅವಘಡ, ಗಂಗೊಳ್ಳಿಯ ಎರಡು ಅಂಗಡಿಗಳು ಸಂಪೂರ್ಣ ಬೆಂಕಿಗಾಹುತಿ

ಕುಂದಾಪುರ: ವಿದ್ಯುತ್ ಅವಘಡ, ಗಂಗೊಳ್ಳಿಯ ಎರಡು ಅಂಗಡಿಗಳು ಸಂಪೂರ್ಣ ಬೆಂಕಿಗಾಹುತಿ

- Advertisement -
- Advertisement -

ಕುಂದಾಪುರ: ಇಂದು ಮುಂಜಾನೆ ಗಂಗೊಳ್ಳಿ ಪೇಟೆಯಲ್ಲಿ ನಡೆದ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ ಎರಡು ಅಂಗಡಿಗಳು ಸಂಪೂರ್ಣ ಸುಟ್ಟು ಹೋಗಿವೆ.

ಜಿ. ದಿನೇಶ್ ನಾಯಕ್ ಹಾಗೂ ಜಿ. ಪದ್ಮನಾಭ್ ನಾಯಕ್ ಅವರ ಎರಡೂ ಅಂಗಡಿಗಳು ಸಂಪೂರ್ಣ ಸುಟ್ಟು ಹೋಗಿದೆ. ಇದರಿಂದ ಅವರಿಗಾಗಿರುವ ನಷ್ಟದ ಮೊತ್ತ ಸುಮಾರು 20 ಲಕ್ಷ ರೂ ಎಂದು ಅಂದಾಜಿಸಲಾಗಿದೆ.

ಇಂದು ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ದುರ್ಘಟನೆ ನಡೆದಿದ್ದು, ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಕುಂದಾಪುರ ಅಗ್ನಿ ಶಾಮಕ ಠಾಣಾಧಿಕಾರಿ ಕೆ.ಎನ್. ಮೊಗೇರ, ಸಿಬಂದಿಯಾದ ಕೆ.ಟಿ. ಗೌಡ, ನಾಗರಾಜ ಪೂಜಾರಿ, ಮಂಜುನಾಥ್ ಪೂಜಾರಿ, ಆನಂದ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ಗಂಗೊಳ್ಳಿ ಎಸ್‌ಐ ಭೀಮಾಶಂಕರ, ಗ್ರಾ.ಪಂ. ಅಧ್ಯಕ್ಷ ಶ್ರೀನಿವಾಸ ಖಾರ್ವಿ ಬೆಂಕಿ ನಂದಿಸುವಲ್ಲಿ ಸಹಕರಿಸಿದರು.

- Advertisement -

Latest News

error: Content is protected !!