Wednesday, July 15, 2026
Homeಪ್ರಮುಖ-ಸುದ್ದಿಮಿಕ್ಸರ್ ತಿನ್ನುವಾಗ ಗಂಟಲಿನಲ್ಲಿ ಕಡಲೆಕಾಯಿ ಸಿಲುಕಿ 3 ವರ್ಷದ ಮಗು ಸಾವು

ಮಿಕ್ಸರ್ ತಿನ್ನುವಾಗ ಗಂಟಲಿನಲ್ಲಿ ಕಡಲೆಕಾಯಿ ಸಿಲುಕಿ 3 ವರ್ಷದ ಮಗು ಸಾವು

- Advertisement -
- Advertisement -

ಕೇರಳ: ಮಲಪ್ಪುರಂ ಜಿಲ್ಲೆಯ ವೆಂಗರಾ ಸಮೀಪದ ಕುನ್ನುಂಪುರಂನಲ್ಲಿ ಮನೆಯಲ್ಲಿ ಮಿಕ್ಸ್‌ಚರ್ ತಿನ್ನುತ್ತಿದ್ದ ಮೂರು ವರ್ಷದ ಬಾಲಕನ ಗಂಟಲಿನಲ್ಲಿ ಕಡಲೆಕಾಯಿ ಆಕಸ್ಮಿಕವಾಗಿ ಸಿಲುಕಿ, ಮಗು ಸಾವನ್ನಪ್ಪಿದ ಘಟನೆ ನಡೆದಿದೆ.

ಮಗುವಿಗೆ ಉಸಿರಾಟದ ಸಮಸ್ಯೆ ಎದುರಾಗುತ್ತಿದ್ದಂತೆ ಗಾಬರಿಗೊಂಡ ಪೋಷಕರು ತಕ್ಷಣವೇ ಮಗುವನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅಗತ್ಯ ಕಾನೂನು ಕ್ರಮಗಳೊಂದಿಗೆ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

ಸಣ್ಣ ಮಕ್ಕಳಿಗೆ ಬೀಜಗಳು ಅಥವಾ ಗಟ್ಟಿಯಾದ ಆಹಾರ ಪದಾರ್ಥಗಳನ್ನು ನೀಡುವಾಗ ಪೋಷಕರು ಹೆಚ್ಚಿನ ಜಾಗ್ರತೆ ವಹಿಸುವುದು ಅತ್ಯಗತ್ಯ ಎಂಬುದನ್ನು ಈ ಘಟನೆ ಮತ್ತೊಮ್ಮೆ ನೆನಪಿಸಿದೆ.

- Advertisement -

Latest News

error: Content is protected !!