
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಏರ್‌ಪೋರ್ಟ್ಸ್ ಕೌನ್ಸಿಲ್ ಇಂಟರ್‌ನ್ಯಾಶನಲ್ (ACI) ಸಂಸ್ಥೆಯ ‘ಏರ್‌ಪೋರ್ಟ್ ಕಸ್ಟಮರ್ ಎಕ್ಸ್‌ಪೀರಿಯನ್ಸ್ ಅಕ್ರೆಡಿಟೇಶನ್’ ಕಾರ್ಯಕ್ರಮದಡಿ ಅತ್ಯುನ್ನತ ‘ಲೆವೆಲ್ 5’ ಮಾನ್ಯತೆ ಲಭಿಸಿದೆ.
ಈ ಮೂಲಕ ಅದಾನಿ ಏರ್‌ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್ ನೆಟ್‌ವರ್ಕ್‌ನಲ್ಲಿ ಮುಂಬೈ ಮತ್ತು ಅಹಮದಾಬಾದ್ ನಂತರ ಈ ಗೌರವ ಪಡೆದ ಮೂರನೇ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. ಕರ್ನಾಟಕದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಕ ಈ ಅಪರೂಪದ ಮೈಲುಗಲ್ಲು ತಲುಪಿದ ಎರಡನೇ ವಿಮಾನ ನಿಲ್ದಾಣ ಇದಾಗಿದ್ದು, ದೇಶದಲ್ಲೇ ಈ ಜಾಗತಿಕ ಮಾನ್ಯತೆ ಪಡೆದ ಕೇವಲ ನಾಲ್ಕು ವಿಮಾನ ನಿಲ್ದಾಣಗಳಲ್ಲಿ ಒಂದಾಗಿ ಹೊರಹೊಮ್ಮಿದೆ.
ಈ ಹಿಂದೆ 2024ರ ಫೆಬ್ರವರಿಯಲ್ಲಿ ‘ಲೆವೆಲ್ 3’ ಹಾಗೂ 2025ರ ಜುಲೈನಲ್ಲಿ ‘ಲೆವೆಲ್ 4’ ಮಾನ್ಯತೆ ಪಡೆದಿದ್ದ ಮಂಗಳೂರು ವಿಮಾನ ನಿಲ್ದಾಣವು, ಇದೀಗ ಇಡೀ ವ್ಯವಸ್ಥೆಯುದ್ದಕ್ಕೂ ಅತ್ಯುತ್ತಮ ಗ್ರಾಹಕ ಸೇವೆಯನ್ನು ಯಶಸ್ವಿಯಾಗಿ ಅಳವಡಿಸಿಕೊಂಡಿರುವುದಕ್ಕಾಗಿ ಅತ್ಯುನ್ನತ ‘ಲೆವೆಲ್ 5’ ಮುದ್ರೆ ಪಡೆದಿದೆ.


