Wednesday, June 3, 2026
HomeUncategorizedಪುಲ್ವಾಮಾ: ಎನ್ ಕೌಂಟರ್ ನಲ್ಲಿ ಓರ್ವ ಉಗ್ರನನ್ನು ಹೊಡೆದುರುಳಿಸಿದ ಸೇನೆ, ಭಾರತೀಯ ಯೋಧ ಹುತಾತ್ಮ

ಪುಲ್ವಾಮಾ: ಎನ್ ಕೌಂಟರ್ ನಲ್ಲಿ ಓರ್ವ ಉಗ್ರನನ್ನು ಹೊಡೆದುರುಳಿಸಿದ ಸೇನೆ, ಭಾರತೀಯ ಯೋಧ ಹುತಾತ್ಮ

- Advertisement -
- Advertisement -

ಜಮ್ಮು ಕಾಶ‍್ಮೀರ: ಪುಲ್ವಾಮಾದ ಗೂಸು ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ಪ್ರಾರಂಭವಾದ ಎನ್‌ಕೌಂಟರ್‌ನಲ್ಲಿ ಓರ್ವ ಭಯೋತ್ಪಾದಕ ಸಾವನ್ನಪ್ಪಿದ್ದು, ಒಬ್ಬ ಜವಾನ್ ಹುತಾತ್ಮರಾಗಿದ್ದಾರೆ. ಪೊಲೀಸರು ಮತ್ತು ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ.

ಬೆಳಗ್ಗೆ ಪುಲ್ವಾಮಾದ ಗೂಸು ಎಂಬ ಪ್ರದೇಶದಲ್ಲಿ ಉಗ್ರರು ಅಡಗಿಕುಳಿತಿರುವ ಖಚಿತ ಮಾಹಿತಿ ಪಡೆದು ಭಾರತೀಯ ಸೇನಾ ಪಡೆ, ಕಾರ್ಯಾಚರಣೆಯನ್ನು ಆರಂಭಿಸಿತ್ತು.

ಭದ್ರತಾ ಪಡೆಗಳು ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗ ಉಗ್ರರ ಗುಂಪು ಗುಂಡು ಹಾರಿಸಿತು. ಇದರಿಂದ ಪೊಲೀಸ್ ಮತ್ತು ಯೋಧ ತೀವ್ರ ಗಾಯಗೊಂಡರು. ಆದರೆ ಜವಾನ್ ಸಾವನ್ನಪ್ಪಿದರೆ, ಪೊಲೀಸ್ ಸಿಬ್ಬಂದಿ ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ವರದಿಯಾಗಿದೆ.

ಈ ಕಾರ್ಯಾಚರಣೆಯಲ್ಲಿ ಜೈಶ್-ಎ-ಮೊಹಮ್ಮದ್ ಸಂಘಟನೆಗೆ‌ ಸೇರಿದ ಮೂವರು ಭಯೋತ್ಪಾದಕರು ಸಿಕ್ಕಿಬಿದ್ದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸ್ಥಳದಲ್ಲಿ ಇನ್ನೂ ಮತ್ತಷ್ಟು ಉಗ್ರರು ಅಡಗಿ ಕುಳಿತಿರುವ ಶಂಕೆಗಳು ವ್ಯಕ್ತವಾಗಿದ್ದು, ಕಾರ್ಯಾಚರಣೆ ಮುಂದುವರೆದಿದೆ ಎಂದು ತಿಳಿದುಬಂದಿದೆ.

- Advertisement -

Latest News

error: Content is protected !!