Monday, May 13, 2024
Homeತಾಜಾ ಸುದ್ದಿಸಂಸದರೊಬ್ಬರ ಪೆನ್ ಡ್ರೈವ್ ಪ್ರಕರಣ; SIT ತಂಡ ರಚಿಸಿ ಸರ್ಕಾರ ಅಧಿಕೃತ ಆದೇಶ

ಸಂಸದರೊಬ್ಬರ ಪೆನ್ ಡ್ರೈವ್ ಪ್ರಕರಣ; SIT ತಂಡ ರಚಿಸಿ ಸರ್ಕಾರ ಅಧಿಕೃತ ಆದೇಶ

spot_img
- Advertisement -
- Advertisement -

ಬೆಂಗಳೂರು: ಸಂಸದರೊಬ್ಬರ ಪೆನ್ ಡ್ರೈವ್ ಪ್ರಕರಣದ ತನಿಖೆಗೆ  SIT  ತಂಡ ರಚಿಸಿ ಸರ್ಕಾರ ಅಧಿಕೃತ ಆದೇಶ ನೀಡಿದೆ.

ಈ ಕುರಿತಂತೆ ಒಳಾಡಳಿತ ಇಲಾಖೆಯ ಅಪರಾಧಗಳು ವಿಭಾಗದ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ಅದರಲ್ಲಿ ಹಾಸನ ಜಿಲ್ಲೆಯಲ್ಲಿ ಮಹಿಳೆರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಹಾಗೂ ಈ ಸಂಬಂಧ ಹಾಸನ ಜಿಲ್ಲೆಯ ಹೊಳೆನರಸೀಪುರ ಟೌನ್ ಪೊಲೀಸ್ ಠಾಣೆಯ ಕ್ರಿಮಿನಲ್ ಮೊಕದ್ದಮ್ಮೆ ಸಂಖ್ಯೆ 107/2024 ಕಲಂ 354ಎ, 354ಡಿ, 506, 509 ಐಪಿಸಿ ರಡಿ ದಾಖಲಾಗಿರುವ ಪ್ರಕರಣದ ಸಮಗ್ರ ತನಿಖೆಯನ್ನು ಕೈಗೊಳ್ಳಲು ತಾಂತ್ರಿಕ ಪರಿಣಿತಿ ಇರುವ ರಾಜ್ಯ ವಿಶೇಷ ತನಿಖಾ ಸಂಸ್ಥೆಯಾದ ಸಿಐಟಿಯ ಒಂದು ವಿಶೇಷ ತನಿಖಾ ತಂಡವನ್ನು ರಚಿಸಿ ಸರ್ಕಾರ ಆದೇಶಿಸಿದೆ ಎಂದಿದ್ದಾರೆ.

ರಾಜ್ಯ ಸರ್ಕಾರ ರಚಿಸಿರುವಂತ ಸಿಐಡಿಯ ಎಸ್ ಐಟಿ ತಂಡ ವಿಶೇಷ ತಂಡ ಮುಖ್ಯಸ್ಥರನ್ನಾಗಿ ಬೆಂಗಳೂರಿನ ಸಿಐಡಿಯ ಅಪರ ಪೊಲೀಸ್ ಮಹಾನಿರ್ದೇಶಕರಾದಂತ ಬಿಜಯ ಕುಮಾರ್ ಸಿಂಗ್ ಅವರನ್ನು ನೇಮಿಸಲಾಗಿದೆ.

ಸದಸ್ಯರನ್ನಾಗಿ ಬೆಂಗಳೂರಿನ ಸಹಾಯಕ ಪೊಲೀಸ್ ಮಹಾ ನಿರೀಕ್ಷಕರಾದಂತ ಸುಮನ್ ಡಿ ಪೆನ್ನೇಕರ್, ಮೈಸೂರು ಜಿಲ್ಲೆಯ ಪೊಲೀಸ್ ಅಧೀಕ್ಷಕರಾದಂತ ಸೀಮಾ ಲಾಠ್ಕರ್ ಅವರನ್ನು ನೇಮಕ ಮಾಡಲಾಗಿದೆ.

- Advertisement -
spot_img

Latest News

error: Content is protected !!