Thursday, June 4, 2026
Homeತಾಜಾ ಸುದ್ದಿಹಾಸನ ಪೆನ್ ಡ್ರೈವ್ ಪ್ರಕರಣ; ಪ್ರಜ್ವಲ್ ರೇವಣ್ಣ ಬಂಗಲೆಗೆ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರ ತಪಾಸಣೆ

ಹಾಸನ ಪೆನ್ ಡ್ರೈವ್ ಪ್ರಕರಣ; ಪ್ರಜ್ವಲ್ ರೇವಣ್ಣ ಬಂಗಲೆಗೆ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರ ತಪಾಸಣೆ

- Advertisement -
- Advertisement -

ಹಾಸನದ ಪ್ರಜ್ವಲ್ ರೇವಣ್ಣನವರ ನಿವಾಸಕ್ಕೆ ಮೇ 13ರಂದು ಆಗಮಿಸಿದ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು, ಪರಿಶೀಲನೆ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.

ಹಾಸನ ಸಂಸದರ ಮೇಲೆ ಬಂದಿರುವ ಲೈಂಗಿಕ ದೌರ್ಜನ್ಯದ ಆರೋಪಕ್ಕೆ ಸಂಬಂಧಿಸಿದಂತೆ ಹಾಸನ ಸಂಸದರ ನಿವಾಸದಲ್ಲಿ ವಿಧಿವಿಜ್ಞಾನ ತಜ್ಞರು ಭೇಟಿ ನೀಡಿ ಪರೀಕ್ಷೆ ನಡೆಸಿದ್ದಾರೆ. ಆ ನಿವಾಸದಲ್ಲೇ ಪ್ರಜ್ವಲ್ ರೇವಣ್ಣನವರು ಅನೇಕರ ಮೇಲೆ ಲೈಂಗಿಕ ಕಿರುಕುಳ ಎಸಗಿದ್ದಾರೆ ಎಂದು ಹೇಳಲಾಗಿದೆ. ಆ ಹಿನ್ನೆಲೆಯಲ್ಲಿ, ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ಆರಂಭಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ದೇವೇಗೌಡರಿಗಾಗಿ ಸರ್ಕಾರ ಅವರಿಗಾಗಿಯೇ ನಿವಾಸವನ್ನು ಕಟ್ಟಿಕೊಟ್ಟಿತ್ತು. ಸಾಮಾನ್ಯವಾಗಿ ದೇವೇಗೌಡರು ಬೆಂಗಳೂರಿನಲ್ಲೇ ನೆಲೆಸುವುದರಿಂದ ಅದೇ ನಿವಾಸವನ್ನು ಪ್ರಜ್ವಲ್ ರೇವಣ್ಣ ಉಪಯೋಗಿಸುತ್ತಿದ್ದರು ಎಂದು ಹೇಳಲಾಗಿದೆ.

- Advertisement -

Latest News

error: Content is protected !!