- Advertisement -
- Advertisement -
ಮಣಿಪಾಲ: ಯುವಕರ ಗುಂಪೊಂದು ಏಕಾಏಕಿ ಯುವಕನಿಗೆ ಹಲ್ಲೆ ನಡೆಸಿರುವ ಘಟನೆ ಮಣಿಪಾಲದಲ್ಲಿ ನಡೆದಿದೆ.
ಮಣಿಪಾಲದ ಸಮೀಪದ ಆದರ್ಶ ನಗರದ ಅಟೋ ನಿಲ್ದಾಣದ ಬಳಿ ಹಲ್ಲೆ ನಡೆದಿದ್ದು, ಹಲ್ಲೆಯ ದೃಶ್ಯ ಸ್ಥಳೀಯ ಅಂಗಡಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಎರಡು ದಿನಗಳ ಹಿಂದೆ ನಡೆದಿರುವ ಘಟನೆಯ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಇಬ್ಬರು ಯುವಕರು ಸೇರಿ ಓರ್ವ ಯುವಕನಿಗೆ ಹೊಡೆದು ನೆಲಕ್ಕೆ ಕೆಡವಿ ತುಳಿದು ಹಲ್ಲೆ ನಡೆಸಿದ್ದಾರೆ.
ಹಲ್ಲೆ ನಡೆಸಿದ ವ್ಯಕ್ತಿಗಳು ಮತ್ತು ಕಾರಣದ ಬಗ್ಗೆ ಇನ್ನಷ್ಟೇ ಮಾಹಿತಿ ತಿಳಿದು ಬರಬೇಕಾಗಿದೆ
- Advertisement -