Wednesday, June 24, 2026
Homeಕರಾವಳಿಉಡುಪಿಉಡುಪಿ; ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದ ಅಡಿಕೆ ಹಾಗೂ ಹಿಂಗಾರ ಕಳ್ಳತನ ಮಾಡುತ್ತಿದ್ದ ಕಳ್ಳ

ಉಡುಪಿ; ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದ ಅಡಿಕೆ ಹಾಗೂ ಹಿಂಗಾರ ಕಳ್ಳತನ ಮಾಡುತ್ತಿದ್ದ ಕಳ್ಳ

- Advertisement -
- Advertisement -

ಉಡುಪಿ; ಅಡಿಕೆ ಹಾಗೂ ಹಿಂಗಾರ ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ತೋಟದ ಕೆಲಸಗಾರರು ರೆಡ್ ಹ್ಯಾಂಡಾಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಕೆಂಚನಕೆರೆಯಲ್ಲಿ ನಡೆದಿದೆ. ಅಂಗಾರ ಗುಡ್ಡೆ ನಿವಾಸಿ ವಿಜಯ ಬಂಧಿತ ಕಳ್ಳ.

ಕೆಂಚನಕೆರೆಯ ಉದ್ಯಮಿ ಶ್ರೀಕಾಂತ್‌ ಶೆಟ್ಟಿ ಅವರ ತೋಟದಲ್ಲಿ ಬುಧವಾರ ಮಧ್ಯಾಹ್ನ ತೋಟದಿಂದ ಹಿಂಗಾರ ಕಳವು ಮಾಡುತ್ತಿದ್ದ . ಈ ವೇಳೆ ತೋಟದ ಕಾರ್ಮಿಕರಲ್ಲಿ ಒಬ್ಬರಾದ ನಾರಾಯಣ ಎಂಬವರು ಆರೋಪಿ ವಿಜಯನನ್ನು ಹಿಡಿಯಲೆತ್ನಿಸಿದಾಗ ಚೂರಿಯಿಂದ ಹಲ್ಲೆ ಮಾಡಲು ಮುಂದಾಗಿದ್ದಾನೆ. ಈ ವೇಳೆ ನಾರಾಯಣ ಕಿರುಚಿದ್ದರಿಂದ ಉಳಿದ ಕೆಲಸದವರು ಬಂದು ಆರೋಪಿಯನ್ನು ಹಿಡಿದು ಮುಲ್ಕಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಸುಮಾರು ಎರಡು ಕ್ವಿಂಟಾಲ್‌ ಅಡಿಕೆ ಹಾಗೂ 500ಕ್ಕೂ ಹೆಚ್ಚು ಹಿಂಗಾರ ಕಳವು ಮಾಡಲಾಗಿದೆ ಎಂದು ಶ್ರೀಕಾಂತ್‌ ಶೆಟ್ಟಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!