- Advertisement -
- Advertisement -
ಪುತ್ತೂರು; ಬಾರ್ ಸಪ್ಲೈಯರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದಲ್ಲಿ ನಡೆದಿದೆ. ಅಲೆಕ್ಕಿ ನಿವಾಸಿ ಬಾಲಕೃಷ್ಣ ಗೌಡ(51) ಮೃತ ದುರ್ದೈವಿ.
ಸುಮಾರು 22 ವರ್ಷ ಪುತ್ತೂರಿನ ಬಾರೊಂದರಲ್ಲಿ ಸಪ್ಲೈಯರ್ ಆಗಿ ಕೆಲಸ ಮಾಡಿದ್ದು ಇತ್ತೀಚಿನ 2 ವರ್ಷದಿಂದ ಇನ್ನೊಂದು ಬಾರ್‌ನಲ್ಲಿ ಸಪ್ಲೈಯರ್ ಆಗಿ ಕೆಲಸ ಮಾಡುತ್ತಿದ್ದರು. ಅನಾರೋಗ್ಯದ ಹಿನ್ನೆಲೆಯಲ್ಲಿ 1 ತಿಂಗಳ ಹಿಂದೆ ಕೆಲಸಕ್ಕೆ ರಜೆ ಹಾಕಿ ಮನೆಗೆ ಬಂದಿದ್ದರು.
ಆ.30ರಂದು ಮಧ್ಯಾಹ್ನದ ವೇಳೆಗೆ ಬಾಲಕೃಷ್ಣ ಗೌಡರವರ ಪತ್ನಿ ಹಾಗೂ ಹಿರಿಯ ಮಗ ನೆಲ್ಯಾಡಿಗೆ ಔಷಧಿಗೆಂದು ಹೋಗಿದ್ದಾಗ ಮನೆಯಲ್ಲಿ ಯಾರೂ ಇಲ್ಲದ ವೇಳೆ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ನೆಲ್ಯಾಡಿ ಹೊರಠಾಣೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
- Advertisement -