Tuesday, September 10, 2024
Homeಕರಾವಳಿಸೌಜನ್ಯಳಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಕೆಆರ್‌ಎಸ್‌ ಪಕ್ಷದಿಂದ ಬೆಳ್ತಂಗಡಿಯಿಂದ ಬೆಂಗಳೂರಿಗೆ ಪಾದಯಾತ್ರೆ; ಪಾದೆಯಾತ್ರೆಯಲ್ಲಿ 70 ಕಿ.ಮೀ. ಸಾಗಿದ...

ಸೌಜನ್ಯಳಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಕೆಆರ್‌ಎಸ್‌ ಪಕ್ಷದಿಂದ ಬೆಳ್ತಂಗಡಿಯಿಂದ ಬೆಂಗಳೂರಿಗೆ ಪಾದಯಾತ್ರೆ; ಪಾದೆಯಾತ್ರೆಯಲ್ಲಿ 70 ಕಿ.ಮೀ. ಸಾಗಿದ ಶ್ವಾನ

spot_img
- Advertisement -
- Advertisement -

ಬೆಳ್ತಂಗಡಿ; ಸೌಜನ್ಯಳಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಕೆಆರ್‌ಎಸ್‌ ಪಕ್ಷದಿಂದ ಬೆಳ್ತಂಗಡಿಯಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಯುತ್ತಿದೆ.  ಈ ಪಾದೆಯಾತ್ರೆಯಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಶ್ವಾನವೊಂದು  70 ಕಿ.ಮೀ. ಪಾದೆಯಾತ್ರೆಯಲ್ಲಿ ಸಾಗಿದೆ.

ಸದ್ಯ ಪಾದಯಾತ್ರೆಯು ಮೂಡಿಗೆರೆ ಗಡಿ ಭಾಗಕ್ಕೆ ತಲುಪಿದ್ದು, ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದಿಂದ ಪಾದಯಾತ್ರಿಗಳ ಜೊತೆಗೆ ಸೇರಿಕೊಂಡ ಶ್ವಾನ, ಈಗಾಗಲೇ 70 ಕಿ.ಮೀ. ದೂರವನ್ನು ಕ್ರಮಿಸಿ ಪಾದಯಾತ್ರಿಕರೊಂದಿಗೆ ನಡೆದುಕೊಂಡು ಬಂದಿದೆ.

ಪಾದಯಾತ್ರಿಕರು ಕೊಟ್ಟಿಗೆಹಾರ, ಬಣಕಲ್, ಮೂಡಿಗೆರೆ ಹ್ಯಾಂಡ್‌ಪೋಸ್ಟ್, ಜನ್ನಾಪುರ, ಗೋಣಿಬೀಡು, ಕಸ್ಕೇಬೈಲು ತಲುಪಿದರೂ ಶ್ವಾನ ಮಾತ್ರ ಬೆನ್ನು ಬಿಡದೆ ಅವರೊಂದಿಗೆ ಹೆಜ್ಜೆ ಹಾಕುತ್ತಿದೆ.ಪಾದಯಾತ್ರಿಕರು ಈ ಹೆಣ್ಣು ಶ್ವಾನಕ್ಕೆ ‘ಪ್ರಕೃತಿ’ ಅಂತ ಹೆಸರಿಟ್ಟಿದ್ದಾರೆ.

ಬೆಳ್ತಂಗಡಿಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಹೋಗಿ ವಾಪಾಸ್ ಬರುವಾಗ ನೇತ್ರಾವತಿ ಸ್ನಾನಘಟ್ಟದ ಬಳಿ ಈ ಶ್ವಾನ ಪಾದಯಾತ್ರೆ ತಂಡದವರನ್ನು ಹಿಂಬಾಲಿಸಿಕೊಂಡು ಬಂದಿದೆ.  ಈಗ ಚಾರ್ಮಾಡಿ ಘಾಟ್ ಮೂಲಕ 70ಕಿ.ಮೀ ನಡೆದುಕೊಂಡು ಬಂದಿರುವುದು ಎಲ್ಲರೂ ಅಚ್ಚರಿ ಪಡುವಂತಾಗಿದೆ. ಹೋರಾಟಕ್ಕೆ ಶ್ವಾನ ಕೂಡ ಸಾಥ್ ನೀಡಿದೆ ಎಂದು ಪಾದಯಾತ್ರಿಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

- Advertisement -
spot_img

Latest News

error: Content is protected !!