Thursday, June 4, 2026
Homeಕರಾವಳಿಉಡುಪಿಚುನಾವಣೆಗಾಗಿ ಉಡುಪಿಯಲ್ಲಿ ವಿಭಿನ್ನ ಮತಗಟ್ಟೆಗಳನ್ನು ಸ್ಥಾಪಿಸಿದ ಜಿಲ್ಲಾಡಳಿತ

ಚುನಾವಣೆಗಾಗಿ ಉಡುಪಿಯಲ್ಲಿ ವಿಭಿನ್ನ ಮತಗಟ್ಟೆಗಳನ್ನು ಸ್ಥಾಪಿಸಿದ ಜಿಲ್ಲಾಡಳಿತ

- Advertisement -
- Advertisement -

ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ನಾಳೆ ನಡೆಯಲಿರುವ‌ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು ಉಡುಪಿ ಜಿಲ್ಲಾಡಳಿತ ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಿದೆ.

ಚುನಾವಣೆಗಾಗಿ ಕರಾವಳಿಯ ಸಂಸ್ಕೃತಿ ಬಿಂಬಿಸುವ ವಿಭಿನ್ನ ಮತಗಟ್ಟೆಗಳನ್ನು ಉಡುಪಿ ಜಿಲ್ಲೆಯಲ್ಲಿ ಸ್ಥಾಪನೆ ಮಾಡಲಾಗಿದೆ.

ಉಡುಪಿ ನಗರದ ಅಂಬಲಪಾಡಿ ಆಂಗ್ಲ‌ ಮಾಧ್ಯಮ ಶಾಲೆಯನ್ನು ಸಾಂಪ್ರದಾಯಿಕ ಮತಗಟ್ಟೆಯಾಗಿ ಪರಿವರ್ತನೆ ಮಾಡಲಾಗಿದ್ದು, ಮತಗಟ್ಟೆಯ ಒಳಭಾಗವನ್ನು ಗುತ್ತಿನ ಮನೆಯ ರೀತಿಯಲ್ಲಿ ನಿರ್ಮಿಸಲಾಗಿದೆ.

ಇದಲ್ಲದೇ ಮೊದಲ ಬಾರಿಯ ಮತದಾರರಿಗಾಗಿಯೇ ಸೆಲ್ಫಿ ಪಾಯಿಂಟ್ ಕೂಡಾ ನಿರ್ಮಿಸಲಾಗಿದ್ದು, ಮತದಾನಕ್ಕೆ ಹೆಚ್ಚು ಮತದಾರರನ್ನು ಸೆಳೆಯಲು ಉಡುಪಿ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.

- Advertisement -

Latest News

error: Content is protected !!