Saturday, May 4, 2024
Homeಕರಾವಳಿಮಂಗಳೂರುದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಎಂಟು ಕಡೆ ಮಸ್ಟರಿಂಗ್ ಕಾರ್ಯ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಎಂಟು ಕಡೆ ಮಸ್ಟರಿಂಗ್ ಕಾರ್ಯ

spot_img
- Advertisement -
- Advertisement -

ಮಂಗಳೂರು: ನಾಳೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇಂದು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟ ಸಿಬ್ಬಂದಿ ಮಸ್ಟರಿಂಗ್ ಕೇಂದ್ರಗಳಿಂದ ಮತಗಟ್ಟೆಗಳತ್ತ ತೆರಳಿದ್ದಾರೆ.

ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು ಎಂಟು ಕಡೆಗಳಲ್ಲಿ ಮಸ್ಟರಿಂಗ್ ಕೇಂದ್ರ ಸ್ಥಾಪನೆ ಮಾಡಲಾಗಿದೆ.

ಮತಯಂತ್ರ, ವಿವಿ ಪ್ಯಾಟ್ ಸೇರಿದಂತೆ ಅಗತ್ಯ ಚುನಾವಣಾ ಸಾಮಾಗ್ರಿಗಳನ್ನು ಪಡೆದು ನಿಯೋಜಿತ ಮತಗಟ್ಟೆಗಳಿಗೆ ಸಂಜೆ ವೇಳೆಗೆ ಎಲ್ಲಾ ಸಿಬ್ಬಂದಿ ತಲುಪಲಿದ್ದಾರೆ.

ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಒಟ್ಟು 1,876 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದ್ದು, ಒಟ್ಟು 11,225 ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ.ಅಲ್ಲದೇ ಚುನಾವಣಾ ಭದ್ರತೆಗಾಗಿ ಕ್ಷೇತ್ರದಲ್ಲಿ ಒಟ್ಟು 3,100 ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

- Advertisement -
spot_img

Latest News

error: Content is protected !!