Saturday, May 18, 2024
Homeಕರಾವಳಿಮಂಗಳೂರುಬೆಳ್ತಂಗಡಿ : ಸೈನಿಕ ಗಣೇಶ್ ಬಿ.ಎಲ್ ಗೆ ಭವ್ಯ ಸ್ವಾಗತ

ಬೆಳ್ತಂಗಡಿ : ಸೈನಿಕ ಗಣೇಶ್ ಬಿ.ಎಲ್ ಗೆ ಭವ್ಯ ಸ್ವಾಗತ

spot_img
- Advertisement -
- Advertisement -

ಬೆಳ್ತಂಗಡಿ: ದೇಶ ಸೇವೆ ಮಾಡುವ ಭಾಗ್ಯ ಎಲ್ಲರಿಗೂ ಸಿಗೋದಿಲ್ಲ.ಕಠಿನ ಪ್ರದೇಶದಲ್ಲಿ ಸೈನ್ಯದಲ್ಲಿ ಕಳೆದ 21 ವರ್ಷಗಳಿಂದ ಸೇವೆ ಸಲ್ಲಿಸಿದ ನಮ್ಮ ತಾಲೂಕಿನ ಹೆಮ್ಮೆ ಗಣೇಶ್ ಬಿ.ಎಲ್ ಇವರ ದೇಶ ಸೇವೆಗೆ ತಾಲೂಕಿನ ಜನತೆ ಅಬಿನಂದನೆ ಸಲ್ಲಿಸುತ್ತಿದೆ ದೇಶ ಸೇವೆ ಶ್ರೇಷ್ಠ ಸೇವೆ ಎಂದು ಅಪರ ಸರಕಾರಿ ವಕೀಲರಾದ ಮನೋಹರ್ ಕುಮಾರ್ ಇಳಂತಿಲ ಹೇಳಿದರು.

ಅವರು ಮೇ.4 ರಂದು ಶನಿವಾರ ಭಾರತೀಯ ಗಡಿ ಭದ್ರತಾ ಪಡೆಯಲ್ಲಿ 21 ವರ್ಷಗಳ ಕಾಲ ಸೇವೆ ಸಲ್ಲಿಸಿದ ಲಾಯಿಲ ನಿವಾಸಿ ಗಣೇಶ್ ಬಿ ಎಲ್ ರವರನ್ನು ಹುಟ್ಟೂರುಗೆ ಸ್ವಾಗತಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಮರಾಠಿ ಸಂಘದ ಪ್ರಮುಖರಟದ ಉಮೇಶ್ ಕೇಳ್ತಡ್ಕ ಮಾತನಾಡಿ ಇಡೀ ಭಾರತೀಯರೆಲ್ಲರು ನೆಮ್ಮದಿಯಿಂದ ಇರಬೇಕಾದರೆ ಸೈನಿಕರ ಸೇವೆಯೆ ಕಾರಣ.ರಾತ್ರಿ ,ಹಗಲೆನ್ನದೆ, ಗಾಳಿ,ಹಿಮ,ಬಿಸಿಲಿನಲ್ಲಿ ದೇಶದ ರಕ್ಷಣೆಗೋಸ್ಕರ ಕರ್ತವ್ಯ ನಿರ್ವಹಿಸುವ ಸೈನಿಕರಿಗೆ ಗೌರವ ಕೊಡಬೇಕಾದುದು ಎಲ್ಲರ ಕರ್ತವ್ಯ. ಇಂದು ನಮ್ಮ ತಾಲೂಕಿನ ಲಾಯಿಲದ ನಿವಾಸಿ ಗಣೇಶ್ ಬಿ ಎಲ್ 21 ವರ್ಷ ದೇಶ ಸೇವೆ ಮಾಡಿ ಹುಟ್ಟೂರಿಗೆ ಆಗಮಿಸುತ್ತಿರುವುದು ಸಂತಸವಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ವಕೀಲರ ಸಂಘದ ಕಾರ್ಯದರ್ಶಿ ನವೀನ್ ಬಿ ಕೆ, ಕೆಡಿಪಿ ಸದಸ್ಯ ಸಂತೋಷ್ ಕುಮಾರ್, ಬಳಂಜ ಗ್ರಾ ಪಂ ಸದಸ್ಯ ರವೀಂದ್ರ ಅಮೀನ್, ಲಾಯಿಲ ಗ್ರಾ ಪಂ ಉಪಾಧ್ಯಕ್ಷ ಗಣೇಶ್, ಸ.ಹಿ ಪ್ರಾ ಶಾಲೆ ಕರ್ನೋಡಿ ಇದರ ಹಳೆ ವಿದ್ಯಾರ್ಥಿ ಸಂಘದ ಅದ್ಯಕ್ಷ ಸುರೇಶ್ ಶೆಟ್ಡಿ, ವಕೀಲರಾದ ಪ್ರಶಾಂತ್,ವಿನಯ ಕುಮಾರ್,ಪ್ರಮುಖರಾದ ಸುನಿಲ್ ಜೈನ್, ಶೇಖರ್ ಲಾಯಿಲ ಮತ್ತು ಮರಾಠಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.ರವಿ ನಾಯ್ಕ್ ಬಡಕೋಡಿ ಕಾರ್ಯಕ್ರಮ ನಿರೂಪಿಸಿದರು. ಕುತ್ಯಾರು ಶ್ರಿ ಸೋಮನಾಥೇಶ್ವರ ದೇವಸ್ಥಾನದಿಂದ ಲಾಯಿಲ ತನಕ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು.

- Advertisement -
spot_img

Latest News

error: Content is protected !!