Tuesday, June 9, 2026
Homeಕರಾವಳಿಮಂಗಳೂರುವಿಟ್ಲ; ಕರಾವಳಿಯಲ್ಲಿ ಹೇಗಿದೆ ನೋಡಿ ಬಿಸಿಲ ಪ್ರತಾಪ;ಬಿಸಿಲಿಗೆ ಚಲಿಸುತ್ತಿದ್ದ ಬಸ್ಸಿನ ಗಾಜು ಒಡೆದು ಮೂವರಿಗೆ ಗಾಯ

ವಿಟ್ಲ; ಕರಾವಳಿಯಲ್ಲಿ ಹೇಗಿದೆ ನೋಡಿ ಬಿಸಿಲ ಪ್ರತಾಪ;ಬಿಸಿಲಿಗೆ ಚಲಿಸುತ್ತಿದ್ದ ಬಸ್ಸಿನ ಗಾಜು ಒಡೆದು ಮೂವರಿಗೆ ಗಾಯ

- Advertisement -
- Advertisement -

ವಿಟ್ಲ; ಕರಾವಳಿಯಲ್ಲಿ ತಾಪಮಾನ ದಿನದಿಂದ ದಿನಕ್ಕೆ ಏರುತ್ತಿದೆ. ಮನೆಯಿಂದ ಹೊರಗೆ ಬರೋದಕ್ಕೆ ಜನ ಭಯ ಪಡೋ ಪರಿಸ್ಥಿತಿ ನಿರ್ಮಾಣವಾಗಿದೆ. ಕರಾವಳಿಯಲ್ಲಿ ಬಿಸಿಲ ಪ್ರತಾಪ ಎಷ್ಟರಮಟ್ಟಿಗೆ ಇದೆ ಅನ್ನೋದಕ್ಕೆ ಸಾಕ್ಷಿ ಎಂಬಂತೆ ಘಟನೆಯೊಂದು  ನಡೆದಿದೆ.

ಬಿಸಿಲ ತಾಪಕ್ಕೆ ಚಲಿಸುತ್ತಿದ್ದ ಕೇರಳ ರಾಜ್ಯದ ಬಸ್ಸಿನ ಗಾಜು ಒಡೆದ ಪರಿಣಾಮ ಇಬ್ಬರು ಮಕ್ಕಳು ಮತ್ತು ಚಾಲಕ ಗಾಯಗೊಂಡ ಘಟನೆ ಉರಿಮಜಲು ಎಂಬಲ್ಲಿ ಶನಿವಾರ ನಡೆದಿದೆ.

ಪುತ್ತೂರಿನಿಂದ ವಿಟ್ಲ ಮೂಲಕ ಕಾಸರಗೋಡಿಗೆ ಹೊರಟಿದ್ದ ಕೇರಳ ರಾಜ್ಯದ ಮಲಬಾರ್ ಬಸ್ ಉರಿಮಜಲು ಸೊಸೈಟಿ ತಲುಪುತ್ತಿದ್ದಂತೆ ಮುಂಭಾಗದ ಗಾಜು ಒಡೆದಿದೆ.ಪರಿಣಾಮ ಬಸ್ಸಿನ ಮುಂಭಾಗದಲ್ಲಿದ್ದ ಬಾಲಕ, ಚಾಲಕ ಹಾಗೂ ಪುಟ್ಟ ಮಗುವೊಂದಕ್ಕೆ ಗಾಯವಾಗಿದೆ.

ಗಂಭೀರ ಗಾಯಗೊಂಡ ಕೇರಳದ ಚೇರ್ಕಳದ ನೆಲ್ಲಿಕಟ್ಟೆ ನಿವಾಸಿ ಬಾಲಕನನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

Latest News

error: Content is protected !!