Thursday, June 4, 2026
Homeಕರಾವಳಿಬಂಟ್ವಾಳ: ಬಾಲಕಿಯನ್ನು ಅಪ್ಪಿಕೊಂಡು ಅಸಭ್ಯವಾಗಿ ವರ್ತಿಸಿದಾತನ ವಿರುದ್ಧ ದೂರು ದಾಖಲು

ಬಂಟ್ವಾಳ: ಬಾಲಕಿಯನ್ನು ಅಪ್ಪಿಕೊಂಡು ಅಸಭ್ಯವಾಗಿ ವರ್ತಿಸಿದಾತನ ವಿರುದ್ಧ ದೂರು ದಾಖಲು

- Advertisement -
- Advertisement -

ಬಂಟ್ವಾಳ: ಬಾಲಕಿಯನ್ನು ಅಪ್ಪಿಕೊಂಡು ಅಸಭ್ಯವಾಗಿ ವರ್ತಿಸಿದಾತನ ವಿರುದ್ಧ ದೂರು ದಾಖಲಾಗಿರುವ ಘಟನೆ ಪೊಳಲಿಯಲ್ಲಿ ನಡೆದಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿ ಬಡಕಬೈಲು ನಿವಾಸಿ ಅಮೀನ್ ಯಾನೆ ಮೊಹಮ್ಮದ್ ಅಮೀನ್ ಎಂಬಾತ ಏಪ್ರಿಲ್ 24 ರಂದು  ಪೊಳಲಿಯಲ್ಲಿ ಸಂತ್ರಸ್ತ ಬಾಲಕಿಯ ಹಿಂದಿನಿಂದ ಬಂದು ಜೋರಾಗಿ ಎದೆ ಭಾಗವನ್ನು ಅಪ್ಪಿ, ಕೈಯನ್ನು ಬಲವಾಗಿ ಹಿಡಿದು ತಿರುಗಿ ನೋಡಲು ಕೂಡ ಅವಕಾಶ ನೀಡದೆ ನಿನ್ನ ಮೊಬೈಲ್ ನಂಬರ್ ಕೊಡಬೇಕು, ಇಲ್ಲದಿದ್ದರೇ ನಿನ್ನನ್ನು ರೇಪ್ ಮಾಡದೇ ಬಿಡುವುದಿಲ್ಲ, ನೀನು ನನಗೆ ಬೇಕು ಎಂದು ಹೇಳಿದಾಗ ನೊಂದ ಬಾಲಕಿಯು ಬೊಬ್ಬೆ ಹಾಕಿದ್ದಾಳೆ.

ಈ ವೇಳೆ ಸಂಬಂಧಿಕನೋರ್ವ ಬರುವುದನ್ನು ನೋಡಿ ಆರೋಪಿಯು ಸ್ಕೂಟರ್‌ನಲ್ಲಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!