Saturday, June 6, 2026
Homeಕರಾವಳಿಬಂಟ್ವಾಳ; ಬಸ್ ನಲ್ಲಿ ಯುವತಿಗೆ  ಕಿರುಕುಳ ನೀಡಿದ ಪ್ರಕರಣ; ಯುವತಿ ಮನೆಗೆ ಡಾ. ಕಲ್ಲಡ್ಕ ಪ್ರಭಾಕರ್...

ಬಂಟ್ವಾಳ; ಬಸ್ ನಲ್ಲಿ ಯುವತಿಗೆ  ಕಿರುಕುಳ ನೀಡಿದ ಪ್ರಕರಣ; ಯುವತಿ ಮನೆಗೆ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಭೇಟಿ

- Advertisement -
- Advertisement -

ಬಂಟ್ವಾಳ; ಬಸ್ ನಲ್ಲಿ ಯುವತಿಗೆ  ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯುವತಿ ಮನೆಗೆ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಭೇಟಿ ನೀಡಿದ್ದಾರೆ.

ವಿದ್ಯಾರ್ಥಿನಿ ಮನೆಗೆ ಬುಧವಾರ ಆರ್‌ ಎಸ್‌ ಎಸ್ ಮುಖಂಡ ಡಾ. ಕಲ್ಲಡ್ಲ ಪ್ರಭಾಕರ್ ಭಟ್ ಭೇಟಿ ಧೈರ್ಯ ತುಂಬಿ, ಯುವತಿಯ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಈ ವೇಳೆ ಘಟನೆಯ ಸಂಪೂರ್ಣ ಮಾಹಿತಿ ಪಡೆದುಕೊಂಡ ಅವರು ಕಾನೂನು ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು. ಇಂತಹ ಪ್ರಕರಣಗಳು ನಿತ್ಯನಿರಂತರವಾಗಿ ನಡೆಯುತ್ತಿದೆ, ಭಯೋತ್ಪಾದಕರ ರೀತಿಯಲ್ಲಿ ಹೆಣ್ಮಕ್ಕಳ ಮೇಲೆ ಅನಾಚಾರ ಮಾಡುವಂತಹ ಘಟನೆಗಳು ನಡೆಯುತ್ತಿದೆ. ಸರಕಾರ ಹಾಗೂ ಪೋಲಿಸ್ ‌ಇಲಾಖೆ ಸರಿಯಾದ ಕ್ರಮ ಕೈಗೊಳ್ಳಬೇಕಾಗಿದೆ.ಇಲ್ಲದಿದ್ದರೆ ಅರಾಜಕತೆ ನಿರ್ಮಾಣ ಮಾಡುವ ಸಾಧ್ಯತೆಗಳಿವೆ,ಇದು ದ‌.ಕ.ಜಿಲ್ಲೆ. ಎಚ್ಚರಿಕೆಯ ವಿಚಾರವನ್ನು ಪ್ರಸ್ತಾಪ ಮಾಡುತ್ತಿದ್ದೇನೆ. ಸರಕಾರ ಬಂದ ಮೇಲೆ ಬಾರಿ ಪ್ರಮಾಣದಲ್ಲಿ ನಡೆಯುತ್ತಲೇ ಇದೆ. ಮುಂದುವರಿದು ಹುಬ್ಬಳ್ಳಿಯಲ್ಲಿ ಹತ್ಯೆ ನಡೆದಿದೆ, ಇದೀಗ ಮತ್ತೊಂದು ಪ್ರಕರಣ ಅದೇ ಭಾಗದಲ್ಲಿ ನಡೆದಿದೆ. ಹಿಂದೂ ಸಮಾಜದ ಮೇಲೆ ಮತ್ತು ಹೆಣ್ಣ್ಮಕ್ಕಳ ಮೇಲೆ ಅನ್ಯಾಯಗಳು ನಡೆದರೆ ಅದನ್ನು ಬಲವಾಗಿ ಖಂಡಿಸುತ್ತೇವೆ ಎಂದ ಅವರು ಸರಕಾರ ಎಚ್ಚೆತ್ತು ಸರಿಯಾದ ಕ್ರಮಕೈಗೊಳ್ಳಬೇಕಾಗಿದೆ ಎಂದು ತಿಳಿಸಿದರು.

- Advertisement -

Latest News

error: Content is protected !!