Sunday, June 7, 2026
Homeತಾಜಾ ಸುದ್ದಿಕೊರಗ ಸಮುದಾಯದ ಹಿರಿಯ ನಾಯಕ ಗೋಕುಲ್‌ದಾಸ್ ನಿಧನ

ಕೊರಗ ಸಮುದಾಯದ ಹಿರಿಯ ನಾಯಕ ಗೋಕುಲ್‌ದಾಸ್ ನಿಧನ

- Advertisement -
- Advertisement -

ಮಂಗಳೂರು: ಕರಾವಳಿ ಜಿಲ್ಲೆಯ ಮೂಲ ನಿವಾಸಿಗಳೆಂದು ಗುರುತಿಸಲ್ಪಟ್ಟಿರುವ ಕೊರಗ ಸಮುದಾಯದ ಭೂಮಿಗಾಗಿನ ಹೋರಾಟದಲ್ಲಿ ಸದಾ ಮುಂದಿದ್ದ ಹಿರಿಯ ನಾಯಕ ಪಳ್ಳಿ ಗೋಕುಲ್‌ದಾಸ್ ಬಹು ಅಂಗಾಂಗ ವೈಫಲ್ಯದಿಂದಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ.

ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಗೌರವಾಧ್ಯಕ್ಷ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪಳ್ಳಿ ಗೋಕುಲ್‌ದಾಸ್ ಮೂಲತಃ ಕಾರ್ಕಳ ತಾಲೂಕಿನ ಪಳ್ಳಿ ಗ್ರಾಮದವರಾಗಿದ್ದು, ಕೊರಗ ಸಮುದಾಯದ ಮೊಟ್ಟ ಮೊದಲ ಪಧವೀದರರಾಗಿದ್ದರು.

ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದ ಗೋಕುಲದಾಸರು ನಿವೃತ್ತಿ ಜೀವನವನ್ನು ಮಂಗಳೂರಿನ ಚಿಲಿಂಬಿಯ ತಮ್ಮ ಸ್ವಗೃಹದಲ್ಲಿ ಕಳೆಯುತ್ತಿದ್ದರು. ತಮ್ಮ ಇಳಿ ವಯಸ್ಸಿನಲ್ಲಿಯೂ ಕೊರಗ ಸಮುದಾಯದ ಸಂಘಟನೆ ಮತ್ತು ಅಭಿವೃದ್ಧಿಗಾಗಿ ದುಡಿಯುತ್ತಿದ್ದರು. ಅವಿಭಜಿತ ದ.ಕ. ಜಿಲ್ಲೆಯಲ್ಲಿ ಕೊರಗರ ಯಾವುದೇ ಕಾರ್ಯಕ್ರಮವಿದ್ದರೂ ಅದಕ್ಕೆ ತಪ್ಪದೇ ಹಾಜರಾಗುತಿದ್ದರು.

- Advertisement -

Latest News

error: Content is protected !!