- Advertisement -


- Advertisement -
ಉಡುಪಿ: Friendship Club ಸದಸ್ಯತ್ವ ಹೆಸರಲ್ಲಿ ಸೈಬರ್ ವಂಚಕರು ವೃದ್ಧರೊಬ್ಬರಿಂದ 5 ಲಕ್ಷ ರೂಪಾಯಿ ದೋಚಿದ ಘಟನೆ ಉಡುಪಿಯಲ್ಲಿ ನಡೆದಿದೆ.
ಕಡಿಯಾಳಿ ನಿವಾಸಿ 66 ವರ್ಷದ ಉಸ್ಮಾನ್ ಸಾಹೇಬ್ ಅವರು Friendship Club ಸದಸ್ಯತ್ವ ಪಡೆಯುವ ಉದ್ದೇಶದಿಂದ ಹಂತ ಹಂತವಾಗಿ ಗೂಗಲ್ ಪೇ, ಕ್ಯೂಆರ್ ಸ್ಕ್ಯಾನರ್ ಹಾಗೂ ಬ್ಯಾಂಕ್ ಖಾತೆಯ ಮೂಲಕ ಹಣ ವರ್ಗಾವಣೆ ಮಾಡಿದ್ದರು.
ಜೂನ್ 27ರಿಂದ ಜುಲೈ 14ರವರೆಗೆ ಒಟ್ಟು 5,11,882 ರೂ. ಹಣವನ್ನು ಕಳುಹಿಸಿದ ಬಳಿಕ ಸೈಬರ್ ವಂಚಕರ ಬಲೆಗೆ ಬಿದ್ದಿರುವುದು ಗೊತ್ತಾಗಿದೆ. ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
- Advertisement -


