Friday, June 5, 2026
Homeತಾಜಾ ಸುದ್ದಿಮಾಸ್ಕ್ ಧರಿಸಿ ಎಂದು ಹೇಳಿದ್ದೇ ತಪ್ಪಾಯ್ತು: ನಗರಸಭೆ ಗುತ್ತಿಗೆ ನೌಕರನ ಕೊಲೆ

ಮಾಸ್ಕ್ ಧರಿಸಿ ಎಂದು ಹೇಳಿದ್ದೇ ತಪ್ಪಾಯ್ತು: ನಗರಸಭೆ ಗುತ್ತಿಗೆ ನೌಕರನ ಕೊಲೆ

- Advertisement -
- Advertisement -

ಶಿವಮೊಗ್ಗ: ಮಾಸ್ಕ್ ಹಾಕಿಕೊಳ್ಳಲು ಹೇಳಿದ್ದಕ್ಕೆ ನಗರಸಭೆ ಗುತ್ತಿಗೆ ನೌಕರ ಸುನಿಲ್ (24) ಅವರನ್ನು ಇರಿದು ಕೊಲೆ ಮಾಡಿರುವ ಘಟನೆ  ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ನಡೆದಿದೆ.

ಸುನಿಲ್ ಹಾಗೂ ಮತ್ತೊಬ್ಬ ಸಹೋದ್ಯೋಗಿ ಶ್ರೀಕಂಠ ನಿನ್ನೆ ಸಂಜೆ ಜೊತೆಯಾಗಿ ಅನ್ವರ್ ಕಾಲೊನಿ ಕಡೆಗೆ ತೆರಳಿದ್ದ ವೇಳೆ ಅಲ್ಲಿ ನಿಂತಿದ್ದ ಯುವಕರಿಗೆ ಮಾಸ್ಕ್ ಹಾಕಲು ಹೇಳಿದ್ದಾರೆ. ಈ ವಿಚಾರದಲ್ಲಿ ಪರಸ್ಪರ ಮಾತಿನ ಚಕಮಕಿ ನಡೆದು ಗುಂಪಿನಲ್ಲಿದ್ದ ಕೆಲವರು ಇವರ ಮೇಲೆ ಹಲ್ಲೆ ನಡೆಸಿ ಮಾರಾಕಾಸ್ತ್ರದಿಂದ ಇರಿದಿದ್ದಾರೆ.

ಇರಿತಕ್ಕೊಳಗಾದ ಇವರನ್ನು ಆಸ್ಪತ್ರೆಗೆ ಸೇರಿಸಿದ್ದು ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಸುನಿಲ್ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

- Advertisement -

Latest News

error: Content is protected !!