Tuesday, July 21, 2026
Homeತಾಜಾ ಸುದ್ದಿಲೋಕಸಭೆಯಲ್ಲಿ ಮೇಕೆದಾಟು ಯೋಜನೆಗೆ ತಮಿಳುನಾಡು ವಿರೋಧ; ಬುಧವಾರ ಸಿಡಬ್ಲ್ಯುಎಂಎ ಸಭೆ ನಿಗದಿ

ಲೋಕಸಭೆಯಲ್ಲಿ ಮೇಕೆದಾಟು ಯೋಜನೆಗೆ ತಮಿಳುನಾಡು ವಿರೋಧ; ಬುಧವಾರ ಸಿಡಬ್ಲ್ಯುಎಂಎ ಸಭೆ ನಿಗದಿ

- Advertisement -
- Advertisement -

ನವದೆಹಲಿ: ಕರ್ನಾಟಕದ ಉದ್ದೇಶಿತ ಮೇಕೆದಾಟು ಯೋಜನೆಗೆ ಲೋಕಸಭೆಯಲ್ಲಿ ತಮಿಳುನಾಡು ತೀವ್ರ ವಿರೋಧ ವ್ಯಕ್ತಪಡಿಸಿದೆ.ಇಂದಿನಿಂದ ಆರಂಭವಾಗಿರುವ ಲೋಕಸಭೆ ಅಧಿವೇಶನ ದಲ್ಲಿ ಮೇಕೆದಾಟು ಯೋಜನೆಗೆ ಡಿಎಂಕೆ ಪಕ್ಷ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಲೋಕಸಭೆಯ ಕಲಾಪ ಆರಂಭವಾಗುತ್ತಿದ್ದಂತೆಯೇ ವಿಷಯ ಪ್ರಸ್ತಾಪ ಮಾಡಿದ ಡಿಎಂಕೆ ತಕ್ಷಣವೇ ವಿಚಾರವನ್ನು ಚರ್ಚೆ ನಡೆಸಬೇಕು ಎಂದು ಪಟ್ಟು ಹಿಡಿಯಿತು. ಆದರೆ ಡಿಎಂಕೆ ನಾಯಕರ ಒತ್ತಾಯಕ್ಕೆ ಮಣಿಯದ ಸ್ಪೀಕರ್ ಓಂ ಬಿರ್ಲಾ ಚರ್ಚೆಗೆ ಅವಕಾಶ ನಿರಾಕರಿಸಿದರು.

ಸ್ಪೀಕರ್ ಅನುಮತಿ ನಿರಾಕರಿಸಿದ ಕಾರಣ ತೀವ್ರ ಅಸಮಾಧಾನಗೊಂಡ ಡಿಎಂಕೆ ಸಂಸದರು, ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು‌.

ಈ ಮಧ್ಯೆ ಕಾವೇರಿ ನೀರು ಹರಿಸುವಂತೆ ತಮಿಳುನಾಡು ಪಟ್ಟು ಹಿಡಿದಿದ್ದು, ಬುಧವಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ನವದೆಹಲಿಯಲ್ಲಿ ನಿಗದಿಯಾಗಿದೆ.

- Advertisement -

Latest News

error: Content is protected !!