Saturday, May 25, 2024
Homeಇತರಆಸ್ಪತ್ರೆಯಲ್ಲಿ ಶವವಿಡಲು ಜಾಗವಿಲ್ಲವೆಂದು, ಮನೆಯಲ್ಲೇ ಐಸ್ ಕ್ರೀಂ ಫ್ರಿಜರ್ ನಲ್ಲಿ 50 ಗಂಟೆಗಳ ಕಾಲ...

ಆಸ್ಪತ್ರೆಯಲ್ಲಿ ಶವವಿಡಲು ಜಾಗವಿಲ್ಲವೆಂದು, ಮನೆಯಲ್ಲೇ ಐಸ್ ಕ್ರೀಂ ಫ್ರಿಜರ್ ನಲ್ಲಿ 50 ಗಂಟೆಗಳ ಕಾಲ ಶವವಿಟ್ಟ ಕುಟುಂಬಸ್ಥರು

spot_img
- Advertisement -
- Advertisement -

ಕೊಲ್ಕತಾ : ದೇಶದಲ್ಲಿ ಹೆಚ್ಚಾಗುತ್ತಿರುವ ಕೊರೊನಾ ಪ್ರಕರಣಗಳು ಎಂಥೆಂತ  ಸನ್ನಿವೇಶಗಳಿಗೆ ಎಡೆ ಮಾಡಿಕೊಡುತ್ತಿದೆ ಎಂದು ಹೇಳೋದಕ್ಕೆ ಸಾಧ್ಯವಾಗುತ್ತಿಲ್ಲ. ಕೊಲ್ಕತ್ತಾದಲ್ಲಿ ಒಂದು ಹೃದಯವಿದ್ರಾವಕ ಘಟನೆ ನಡೆದಿದೆ. ಸಾವನ್ನಪ್ಪಿದ ವ್ಯಕ್ತಿಯ ಮೃತದೇಹವನ್ನು ಶವಾಗಾರದಲ್ಲಿ ಇರಿಸಿಕೊಳ್ಳೋದಕ್ಕೆ ಆಸ್ಪತ್ರೆಯಲ್ಲಿ ಒಪ್ಪದ ಕಾರಣ ಮನೆಯಲ್ಲೇ ಫ್ರಿಡ್ಜ್ ನಲ್ಲಿ ಇರಿಸಲಾಗಿದೆ. ನಮಗೆ ಕೇಳಿಸಿಕೊಳ್ಳೋದಕ್ಕೆ ಕಷ್ಟವಾದರೂ ಇದು ನಿಜವಾಗಿ ನಡೆದ ಘಟನೆ.

ಉತ್ತರ ಕೊಲ್ಕತಾದಲ್ಲಿ 71 ವರ್ಷದ ವೃದ್ಧರೊಬ್ಬರು ಜ್ವರ ಮತ್ತು ಕೆಮ್ಮಿನಿಂದ ಸಾವನ್ನಪ್ಪಿದ್ದರು. ಯಾರೇ ಸಾವನ್ನಪ್ಪಿದರೂ ಕೊರೋನಾ ಸೋಂಕು ತಗುಲಿತ್ತೇ ಎಂದು ಪರೀಕ್ಷೆ ನಡೆಸದೆ ಅಂತ್ಯಕ್ರಿಯೆ ಮಾಡುವಂತಿಲ್ಲ. ಹೀಗಾಗಿ, ಆ ವೃದ್ಧರ ಶವವನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಡೆತ್ ಸರ್ಟಿಫಿಕೇಟ್ ನೀಡುವಂತೆ ಕುಟುಂಬಸ್ಥರು ಮನವಿ ಮಾಡಿದರು. ಆದರೆ, ಕೊರೋನಾ ಪರೀಕ್ಷೆಯ ವರದಿ ಕೈಸೇರದೆ ಶವಕ್ಕೆ ಸಂಸ್ಕಾರ ಮಾಡುವಂತಿಲ್ಲ ಎಂದ ವೈದ್ಯರು ತಮ್ಮ ಆಸ್ಪತ್ರೆಯ ಶವಾಗಾರದಲ್ಲಿ ಜಾಗವಿಲ್ಲ ಎಂದು ಹೆಣವನ್ನು ವಾಪಾಸ್ ಕಳುಹಿಸಿದರು.

ಬೇರೆಲ್ಲೂ ಹೆಣವನ್ನು ಇಡೋದಕ್ಕೆ ಜಾಗ ಸಿಗಲಿಲ್ಲ. ಕೊನೆಗೆ ಅನಿವಾರ್ಯವಾಗಿ ಆ ಹೆಣವನ್ನು ಮನೆಗೆ ತರಬೇಕಾಯಿತು. ಅಷ್ಟರಲ್ಲಾಗಲೇ ಅವರು ಸಾವನ್ನಪ್ಪಿ ಹಲವು ಗಂಟೆಗಳು ಕಳೆದಿತ್ತು. ಹೀಗಾಗಿ, ದೇಹದಿಂದ ವಾಸನೆ ಬರ ತೊಡಗಿತ್ತು. ಕೊನೆಗೆ ವೈದ್ಯರ ಸಲಹೆ ಮೇರೆಗೆ ಐಸ್​ಕ್ರೀಂ ಫ್ರೀಜರ್ ಅನ್ನು ತಂದು ಅದರಲ್ಲಿ ಮೃತದೇಹವನ್ನು ಇರಿಸಲಾಯಿತು. ಅದಾಗಿ 2 ದಿನಗಳ ಬಳಿಕ ಕೊರೋನಾ ವರದಿ ಬಂದಿತು. ಅಲ್ಲಿಯವರೆಗೂ ಆ ಮೃತದೇಹವನ್ನು ಫ್ರೀಜರ್​ನಲ್ಲಿಯೇ ಇರಿಸಲಾಗಿತ್ತು. ಸುಮಾರು 50 ಗಂಟೆಗಳ ಕಾಲ ಮನೆಯೊಳಗೇ ಫ್ರೀಜರ್​ನಲ್ಲಿದ್ದ ಶವಕ್ಕೆ ಬುಧವಾರ ಅಂತ್ಯಸಂಸ್ಕಾರ ಮಾಡಲಾಯಿತು. ಆದರೆ, ಅಲ್ಲಿನ ಜಿಲ್ಲಾಧಿಕಾರಿ ಮತ್ತು ಆರೋಗ್ಯಾಧಿಕಾರಿಗಳು ಈ ಆರೋಪವನ್ನು ಅಲ್ಲಗಳೆದಿದ್ದಾರೆ. ಯಾವುದಾದರೂ ಸರ್ಕಾರಿ ಆಸ್ಪತ್ರೆಗೆ ಶವವನ್ನು ತಂದಿದ್ದರೆ ಶವಾಗಾರದಲ್ಲಿ ಇರಿಸುವ ವ್ಯವಸ್ಥೆ ಮಾಡಲಾಗುತ್ತಿತ್ತು. ಈ ಬಗ್ಗೆ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!