Sunday, June 16, 2024
Homeತಾಜಾ ಸುದ್ದಿನನಗೆ ಈ ಲವರ್ ಬೇಡ, IAS ಆಫೀಸರ್ ಜೊತೆ ಮದುವೆ ಮಾಡಿಸು: ಬೆಂಗಳೂರಿನ ಬನಶಂಕರಿ ದೇವಿಗೆ...

ನನಗೆ ಈ ಲವರ್ ಬೇಡ, IAS ಆಫೀಸರ್ ಜೊತೆ ಮದುವೆ ಮಾಡಿಸು: ಬೆಂಗಳೂರಿನ ಬನಶಂಕರಿ ದೇವಿಗೆ ಪತ್ರ ಬರೆದ ಯುವತಿ

spot_img
- Advertisement -
- Advertisement -

ಬೆಂಗಳೂರಿನ ಬನಶಂಕರಿ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯದ ವೇಳೆ ಯುವತಿಯೊಬ್ಬಳು ದೇವರಿಗೆ ಬರೆದ ವಿಚಿತ್ರ ಕೋರಿಕೆಯ ಪತ್ರವೊಂದು ಲಭ್ಯವಾಗಿದೆ. ಇದೀಗ ಪತ್ರ ಎಲ್ಲೆಡೆ ವೈರಲ್ ಆಗಿದೆ.

ಪತ್ರದಲ್ಲಿ ಏನಿದೆ?
“ಅಮ್ಮ ನಾನು ತಪ್ಪು ಮಾಡಿದೀನಿ ಕ್ಷಮಿಸಿ, ಹಿಂದೆ ಪತ್ರ (Devotees Request Letter) ಬರೆದಾಗ ನಾನು ಗೋಪಿನಾಥ್ ಬಿಟ್ರೆ ಯಾರನ್ನೂ ಬೇರೆ ಯಾರನ್ನೂ ಮದುವೆಯಾಗದಂತೆ ಆಗದಂತೆ ಬಯಸಿದ್ದೆ. ಈಗ ಅವನು ನನಗೆ ಬೇಡ. ಆದಷ್ಟು ಬೇಗ ಮುಂದಿನ ವರ್ಷದಷ್ಟರಲ್ಲಿ ನನ್ನ ಮದುವೆ ಆಗುವಂತೆ ಮಾಡು. ಒಳ್ಳೆಯ ಹೆಸರು, ಕೀರ್ತಿ, ಹೃದಯವಂತ, ಗುಣವಂತ, ಸಿರಿವಂತ, ಐಶ್ವರ್ಯವಂತ ಹುಡುಗ ಆಗಿರಬೇಕು, ಯಾವ ಹೀರೋಗೂ ಕಡಿಮೆ ಇರಬಾರದು. ಅಷ್ಟು ಚೆನ್ನಾಗಿರೋ ಒಳ್ಳೆಯ ಐಎಎಸ್ ಅಧಿಕಾರಿ ಜೊತೆ ನನ್ನ ಮದುವೆ ಮಾಡಿಸು. ನನ್ನ ಗಂಡ ಬೇರೆ ಯಾವ ಹೆಂಗಸರನ್ನು, ಹುಡುಗಿಯರನ್ನು ಕೆಟ್ಟ ದೃಷ್ಟಿಯಿಂದ ನೋಡಬಾರದು, ನನ್ನನ್ನ ಹೆಚ್ಚಾಗಿ ಪ್ರೀತಿ ಮಾಡಬೇಕು. ನಾನಂದ್ರೆ ಅವರಿಗೆ ಜೀವ ಆಗಿರಬೇಕು. ನನಗೆ ಮಕ್ಕಳು, ಮೊಮ್ಮಕ್ಕಳ ಜೊತೆ ಜೀವನ ಮಾಡಬೇಕು ಇಷ್ಟು ವರ್ಷ ಕಾದಿದ್ದಕ್ಕೆ ಒಳ್ಳೆ ಹುಡುಗ ಸಿಕ್ಕಿದ ಅಂತ ಆಡಿಕೊಳ್ಳೋರ ಬಾಯಿ ಮುಚ್ಚಿಸಬೇಕು ಅಂತಾ ಹುಡುಗ ಕೊಡು ಎಂದು ಬೇಡಿಕೊಂಡಿದ್ದಾಳೆ.

ಅಂದ್ಹಾಗೆ ಈ ಹಿಂದೆ ಇದೇ ರೀತಿ ದೇವರಿಗೆ ಪತ್ರ ಬರೆದು ಕಾಣಿಕೆ ಹುಂಡಿಗೆ ಹಾಕಿದ್ದಳು. ಅದರಲ್ಲಿ ತಾನು ಪ್ರೀತಿಸುತ್ತಿದ್ದ ಹುಡುಗ ಬೇಕು ಎಂದಿದ್ದಳು. ಆದರೆ ಈಗ ಆ ಹುಡುಗ ಬೇಡ ಐಎಎಸ್ ಆಫೀಸರ್ ಜೊತೆ ಮದುವೆ ಮಾಡಿಸು ಎಂದು ಪತ್ರ ಬರೆದಿದ್ದಾಳೆ.

- Advertisement -
spot_img

Latest News

error: Content is protected !!