Sunday, June 16, 2024
Homeಕರಾವಳಿಕಾಸರಗೋಡುಕಾಸರಗೋಡು; ಗ್ಯಾರೇಜ್ ಮಾಲೀಕನ ಮೃತದೇಹ ಚರಂಡಿಯಲ್ಲಿ ಪತ್ತೆ

ಕಾಸರಗೋಡು; ಗ್ಯಾರೇಜ್ ಮಾಲೀಕನ ಮೃತದೇಹ ಚರಂಡಿಯಲ್ಲಿ ಪತ್ತೆ

spot_img
- Advertisement -
- Advertisement -

ಕಾಸರಗೋಡು; ಗ್ಯಾರೇಜ್ ಮಾಲೀಕರೊಬ್ಬರ ಮೃತದೇಹ ಚರಂಡಿಯಲ್ಲಿ ಪತ್ತೆಯಾಗಿರುವ ಘಟನೆ ಕಾಸರಗೋಡಿನ ಬಂದಡ್ಕದಲ್ಲಿ ನಡೆದಿದೆ. ಬಂದಡ್ಕ ಪೆಟ್ರೋಲ್ ಸಮೀಪದ ನಿವಾಸಿ ರತೀಶ್(42) ಮೃತ ದುರ್ದೈವಿ.

ಗ್ಯಾರೇಜ್ ಜೊತೆಗೆ ಆಂಬ್ಯುಲೆನ್ಸ್ ಚಾಲಕರಾಗಿಯೂ ದುಡಿಯುತ್ತಿದ್ದ ರತೀಶ್ ಗುರುವಾರ ರಾತ್ರಿ 9:30 ರ ಸುಮಾರಿಗೆ ಸ್ಕೂಟರ್ ನಲ್ಲಿ ಮನೆಯಿಂದ ತೆರಳಿದವರು ವಾಪಸ್ ಮನೆಗೆ ಬಂದಿರಲಿಲ್ಲ.ಶುಕ್ರವಾರ ಬೆಳಗ್ಗೆ ಗ್ಯಾರೇಜ್ ಸಮೀಪದ ರಸ್ತೆಯ ಚರಂಡಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ ಎನ್ನಲಾಗಿದೆ.ಸ್ಕೂಟರ್ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.

ಬೇಡಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

- Advertisement -
spot_img

Latest News

error: Content is protected !!