Saturday, March 15, 2025
Homeತಾಜಾ ಸುದ್ದಿಎಸ್ ಐಟಿ ನೋಟಿಸ್ ಗೆ ಡೋಂಟ್ ಕೇರ್ ;ವಿದೇಶಾಂಗ ಸಚಿವಾಲಯದಿಂದ ಪ್ರಜ್ವಲ್ ರೇವಣ್ಣಗೆ ಶೋಕಾಸ್ ನೋಟಿಸ್

ಎಸ್ ಐಟಿ ನೋಟಿಸ್ ಗೆ ಡೋಂಟ್ ಕೇರ್ ;ವಿದೇಶಾಂಗ ಸಚಿವಾಲಯದಿಂದ ಪ್ರಜ್ವಲ್ ರೇವಣ್ಣಗೆ ಶೋಕಾಸ್ ನೋಟಿಸ್

spot_img
- Advertisement -
- Advertisement -

ಬೆಂಗಳೂರು :  ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಸಂಸದ ಪ್ರಜ್ವಲ್ ರೇವಣ್ಣ ಎಸ್ ಐಟಿ ನೋಟಿಸ್ ಗೆ ಡೋಂಟ್ ಕೇರ್ ಅನ್ನುತ್ತಲೇ ಬಂದಿದ್ದಾರೆ. ಇದೀಗ  ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್ಪೋರ್ಟ್ ರದ್ದು ಮಾಡುವಂತೆ ಎಸ್‌ಐಟಿ ಕೇಂದ್ರಕ್ಕೆ ಪತ್ರ ಬರೆದಿರುವ ಬೆನ್ನಲ್ಲೇ ಅಲರ್ಟ್ ಆಗಿರುವ ವಿದೇಶಾಂಗ ಸಚಿವಾಲಯ ಇದೀಗ ಉತ್ತರ ಕೊಡುವಂತೆ ಪ್ರಜ್ವಲ್ ರೇವಣಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ .

ಪ್ರಜ್ವಲ್ ಪಾಸ್ಪೋರ್ಟ್ ರದ್ದು ಮಾಡುವಂತೆ ಎಸ್‌ಐಟಿ ಪತ್ರ ಬರೆದಿತ್ತು. ಈ ಹಿನ್ನೆಲೆಯಲ್ಲಿ SIT ಪತ್ರ ಬರೆದ ಬೆನ್ನಲ್ಲೆ ವಿದೇಶಾಂಗ ಸಚಿವಾಲಯ ಅಲರ್ಟ್ ಆಗಿದ್ದು ಪ್ರಜ್ವಲ್ ಗೆ ಇದೀಗ ಶೋಕಸ್ ನೋಟಿಸ್ ಜಾರಿ ಮಾಡಿ ಈ ಮೂಲಕ ವಿದೇಶಾಂಗ ಸಚಿವಾಲಯ ಉತ್ತರ ಕೇಳಿದೆ ಎನ್ನಲಾಗಿದೆ.

ಯಾವ ಕಾರಣಕ್ಕೆ ವಿದೇಶಕ್ಕೆ ಹೋಗಿದ್ದೇನೆ. ಯಾವ ಕಾರಣಕ್ಕೆ ವಿದೇಶದಲ್ಲಿದ್ದೇನೆ. ನನ್ನ ಕೆಲಸ ಏನು ಯಾವಾಗ ಬಂದು ಹಾಜರಾಗುತ್ತೇನೆ ಎಂಬುದರ ಕುರಿತು ಶೋಕಾಸ್ ನೋಟಿಸ್ ಗೆ ಪ್ರಜ್ವಲ್ ರೇವಣ್ಣ ಅವರು ಉತ್ತರಿಸಬೇಕಾಗುತ್ತದೆ. ಹೀಗಾಗಿ ಈಗಾಗಲೇ ಪ್ರಜ್ವಲ್ ರೇವಣಿಗೆ ನೋಟಿಸ್ ಮೇಲೆ ನೋಟಿಸ್ ನೀಡಲಾಗಿದ್ದು ಇದಕ್ಕೆ ಯಾವ ರೀತಿ ಉತ್ತರಿಸುತ್ತಾರೆ ಎಂದು ಕಾದು ನೋಡಬೇಕಾಗಿದೆ

- Advertisement -
spot_img

Latest News

error: Content is protected !!