Monday, June 17, 2024
Homeಕರಾವಳಿಉಡುಪಿಉಡುಪಿ; ಕುಂಜಿಬೆಟ್ಟುವಿನಲ್ಲಿ ಎರಡು ತಂಡಗಳ ನಡುವೆ ರಾಷ್ಟ್ರೀಯ ಹೆದ್ದಾರಿಯಲ್ಲೇ ಗ್ಯಾಂಗ್ ವಾರ್: ನಡುರಸ್ತೆಯಲ್ಲೇ ತಲವಾರ್ ಝಳಪಿಸಿದ...

ಉಡುಪಿ; ಕುಂಜಿಬೆಟ್ಟುವಿನಲ್ಲಿ ಎರಡು ತಂಡಗಳ ನಡುವೆ ರಾಷ್ಟ್ರೀಯ ಹೆದ್ದಾರಿಯಲ್ಲೇ ಗ್ಯಾಂಗ್ ವಾರ್: ನಡುರಸ್ತೆಯಲ್ಲೇ ತಲವಾರ್ ಝಳಪಿಸಿದ ಯುವಕರು

spot_img
- Advertisement -
- Advertisement -

ಉಡುಪಿ; ರಾಷ್ಟ್ರೀಯ ಹೆದ್ದಾರಿಯಲ್ಲೇ ಎರಡು ತಂಡಗಳ ನಡುವೆ  ಗ್ಯಾಂಗ್ ವಾರ್ ನಡೆದಿರುವ ಘಟನೆ ಉಡುಪಿಯ ಕುಂಜಿಬೆಟ್ಟುವಿನಲ್ಲಿ ನಡೆದಿದೆ.

ಉಡುಪಿ – ಮಣಿಪಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಕಾರುಗಳಲ್ಲಿ ಬಂದು ತಲವಾರ್ ನಲ್ಲಿ ಹೊಡೆದಾಡಿಕೊಂಡಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ಗರುಡ ಗ್ಯಾಂಗ್ ಗೆ ಸೇರಿದ ಇಬ್ಬರು ಆರೋಪಿಗಳಾದ ಆಶಿಕ್ ಮತ್ತು ರಖೀಬ್ ಎಂಬವರನ್ನು ಬಂಧಿಸಲಾಗಿದೆ. ಉಳಿದವರು ಪರಾರಿಯಾಗಿದ್ದಾರೆ.

ಮೇ 20ರಂದು ಪ್ರಕರಣ ದಾಖಲಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವೀಡಿಯೋ ಆಧರಿಸಿ ಹೆಚ್ಚುವರಿ ಪ್ರಕರಣಗಳನ್ನು ದಾಖಲಿಸಲಾಗುವುದು. ಎರಡು ಸ್ವಿಫ್ಟ್ ಕಾರು, ಎರಡು ಬೈಕ್, ಒಂದು ತಲವಾರು ಹಾಗೂ ಡ್ರ್ಯಾಗರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|ಅರುಣ್ ಕೆ ಹೇಳಿದ್ದಾರೆ. ಆರೋಪಿಗಳಿಗೆ ಜೂನ್ 1 ರ ವರೆಗೆ ನ್ಯಾಯಂಗ ಬಂಧನ ವಿಧಿಸಿದ್ದು, ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೇ 18 ರಂದು ನಡೆದಿರುವ ನಡೆದಿರುವ ಈ ಘಟನೆಯ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

- Advertisement -
spot_img

Latest News

error: Content is protected !!