Friday, July 17, 2026
Homeಕರಾವಳಿಅತ್ತ ದರ್ಶನ್ ಅರೆಸ್ಟ್ ಇತ್ತ ಉಮಾಪತಿ‌ ಧರ್ಮಸ್ಥಳಕ್ಕೆ ಭೇಟಿ

ಅತ್ತ ದರ್ಶನ್ ಅರೆಸ್ಟ್ ಇತ್ತ ಉಮಾಪತಿ‌ ಧರ್ಮಸ್ಥಳಕ್ಕೆ ಭೇಟಿ

- Advertisement -
- Advertisement -

ಬೆಳ್ತಂಗಡಿ : ಚಲನಚಿತ್ರ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಕುಟುಂಬ ಸಮೇತ ಇಂದು ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನ ಪಡೆದರು.

ನಿರ್ಮಾಪಕ ಉಮಾಪತಿ ಶ್ರೀ‌ನಿವಾಸ್ ಕುಟುಂಬ ಸಮೇತ ಜೂ.16 ರಂದು ಭಾನುವಾರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ನಂತರ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿದರು. 

ಮಕ್ಕಳಿಗೆ ರಜೆ ಇದ್ದ ಕಾರಣ ಕುಟುಂಬ ಸಮೇತವಾಗಿ ಧರ್ಮಸ್ಥಳಕ್ಕೆ ಬಂದು ಮಂಜುನಾಥ ಸ್ವಾಮಿಯ ದರ್ಶನ ಹಾಗೆಯೇ ಶೃಂಗೇರಿ ಶಾರದಾಂಬ ,ಹೊರನಾಡು ಅಣ್ಣಪೂರ್ಣೇಶ್ವರಿ ದೇವಸ್ಥಾನಗಳಿಗೆ ಹೋಗಿರುವುದಾಗಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಮಹಾ ಎಕ್ಸ್ ಪ್ರೆಸ್ ವೆಬ್ ಸೈಟ್ ಗೆ ಮಾಹಿತಿ ನೀಡಿದ್ದಾರೆ.

ಇತ್ತ ದರ್ಶನ್ ಅರೆಸ್ಟ್ ಆಗುತ್ತಿದ್ದಂತೆ ಉಮಾಪತಿ‌ ಟೆಂಪಲ್ ರನ್ ಕೈಗೊಂಡಿರೋದು ಅಚ್ಚರಿ ಮೂಡಿಸಿದೆ.

- Advertisement -

Latest News

error: Content is protected !!