Friday, July 17, 2026
Homeಕರಾವಳಿಉಡುಪಿಕಾಲೇಜಿನಿಂದ ಟಿಸಿ ತರುವುದಾಗಿ ಹೇಳಿ ಮನೆಯಿಂದ ಹೊರಟಿದ್ದ ವಿದ್ಯಾರ್ಥಿ ನಾಪತ್ತೆ

ಕಾಲೇಜಿನಿಂದ ಟಿಸಿ ತರುವುದಾಗಿ ಹೇಳಿ ಮನೆಯಿಂದ ಹೊರಟಿದ್ದ ವಿದ್ಯಾರ್ಥಿ ನಾಪತ್ತೆ

- Advertisement -
- Advertisement -

ಕುಂದಾಪುರ: ಕಾಲೇಜಿನಿಂದ ಟಿಸಿ (ವರ್ಗಾವಣೆ ಪತ್ರ) ತರುವುದಾಗಿ ಹೇಳಿ ಮನೆಯಿಂದ ಹೊರಟಿದ್ದ ಉಪ್ಪಿನಕುದ್ರು ಗ್ರಾಮದ ಸಾಲಾರ್ ಬೆಟ್ಟು ನಿವಾಸಿ ಸುಹಾಸ್ (23) ಎಂಬ ಯುವಕ ನಾಪತ್ತೆಯಾಗಿದ್ದು, ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜುಲೈ 13ರಂದು ಬೆಳಗ್ಗೆ 9 ಗಂಟೆಗೆ ಮನೆಯಿಂದ ತೆರಳಿದ್ದ ಸುಹಾಸ್ ತಡವಾದರೂ ಮರಳಿ ಬಾರದಿದ್ದಾಗ, ಕುಟುಂಬಸ್ಥರು ಸ್ನೇಹಿತರು ಹಾಗೂ ಸಂಬಂಧಿಕರ ಬಳಿ ಹುಡುಕಾಟ ನಡೆಸಿದ್ದಾರೆ. ಆದರೆ ಯಾವುದೇ ಮಾಹಿತಿ ಸಿಗದ ಹಿನ್ನೆಲೆಯಲ್ಲಿ ಸದ್ಯ ಪೊಲೀಸರಿಗೆ ದೂರು ನೀಡಲಾಗಿದೆ.

ಸುಮಾರು 5 ಅಡಿ 9 ಇಂಚು ಎತ್ತರವಿರುವ ಈ ಯುವಕ ನಾಪತ್ತೆಯಾದ ಸಮಯದಲ್ಲಿ ನೇರಳೆ ಬಣ್ಣದ ಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದು, ಇವರ ಬಗ್ಗೆ ಯಾವುದೇ ಸುಳಿವು ಸಿಕ್ಕಲ್ಲಿ ತಕ್ಷಣ ಕುಂದಾಪುರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಕೋರಲಾಗಿದೆ.

- Advertisement -

Latest News

error: Content is protected !!