Friday, August 28, 2026
Homeಕರಾವಳಿಉಡುಪಿಮ್ಯಾರೇಜ್ ಆ್ಯನಿವರ್ಸರಿ ಹಿನ್ನೆಲೆಯಲ್ಲಿ ಜೊತೆಯಾಗಿ ಕೊಲ್ಲೂರು ಮೂಕಾಂಬಿಕಾ ದರ್ಶನ ಪಡೆದ ಸಂಸದ ಮತ್ತು ಶಾಸಕ

ಮ್ಯಾರೇಜ್ ಆ್ಯನಿವರ್ಸರಿ ಹಿನ್ನೆಲೆಯಲ್ಲಿ ಜೊತೆಯಾಗಿ ಕೊಲ್ಲೂರು ಮೂಕಾಂಬಿಕಾ ದರ್ಶನ ಪಡೆದ ಸಂಸದ ಮತ್ತು ಶಾಸಕ

- Advertisement -
- Advertisement -

ಉಡುಪಿ: ವಿವಾಹ ವಾರ್ಷಿಕೋತ್ಸವದ ದಿನದ ಹಿನ್ನಲೆಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಶಾಸಕ ಹರೀಶ್ ಪೂಂಜ ಒಂದೇ ದಿನ ಕೊಲ್ಲೂರು ಮೂಕಾಂಬಿಕಾ ದೇವಿಯ ದರ್ಶನ ಪಡೆದಿದ್ದಾರೆ.

ನಿನ್ನೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ವಿವಾಹ ವಾರ್ಷಿಕೋತ್ಸವವಾಗಿದ್ದು, ನಿನ್ನೆ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲು ಬೆಂಗಳೂರಿನಲ್ಲಿದ್ದ ಕಾರಣ ದೇವಸ್ಥಾನಕ್ಕೆ ಭೇಟಿ ನೀಡಿರಲಿಲ್ಲ.‌ ಹೀಗಾಗಿ ಇಂದು ಕೋಟ ಶ್ರೀನಿವಾಸ ಪೂಜಾರಿ ಕುಟುಂಬ ಸಮೇತ ಮುಂಜಾನೆ ಕೊಲ್ಲೂರು ಮೂಕಾಂಬಿಕೆ ದೇವಿಯ ದರ್ಶನ ಪಡೆದಿದ್ದಾರೆ.

ಇದೇ ವೇಳೆ ಇಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ವಿವಾಹ ವಾರ್ಷಿಕೋತ್ಸವದ ದಿನವೂ ಆಗಿದ್ದು, ಹರೀಶ್ ಪೂಂಜಾ ಕೂಡಾ ಕುಟುಂಬ ಸಮೇತ ಇಂದು ಬೆಳಗ್ಗೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

ದೇವಸ್ಥಾನದಲ್ಲಿ ಪರಸ್ಪರ ಶುಭ ಕೋರಿದ ಸಂಸದರು ಮತ್ತು ಶಾಸಕರು ಜೊತೆಯಾಗಿ ದೇವರ ದರ್ಶನ ಪಡೆದಿದ್ದಾರೆ.

- Advertisement -

Latest News

error: Content is protected !!