Thursday, June 25, 2026
Homeತಾಜಾ ಸುದ್ದಿವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾಗೆ ಹುಟ್ಟೂರ ಸನ್ಮಾನ

ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾಗೆ ಹುಟ್ಟೂರ ಸನ್ಮಾನ

- Advertisement -
- Advertisement -

ಉಡುಪಿ: ಎರಡನೇ ಬಾರಿಗೆ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಐವಾನ್ ಡಿಸೋಜ ಅವರಿಗೆ ಹುಟ್ಟೂರ ಸನ್ಮಾನ ಇಂದು ನಡೆಯಿತು.

ಕಾಪು ತಾಲೂಕಿನ ಮುದರಂಗಡಿಯಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ವಿವಿಧ ಧರ್ಮ ಗುರುಗಳು ಮತ್ತು ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.

ಮುದರಂಗಡಿ ಚರ್ಚ್ ನ ಧರ್ಮಗುರು ರೆವರೆಂಡ್ ಫಾದರ್ ಫೆಡ್ರಿಕ್ ಡಿಸೋಜಾ, ಸಂಪಿಗೆ ಚರ್ಚ್ ಧರ್ಮಗುರು ರೆವೆಂರೆಂಡ್ ಫಾದರ್ ವಿನ್ಸಂಟ್ ಡಿಸೋಜಾ, ಎಲ್ಲೂರು ವಿಶ್ವನಾಥ್ ಕ್ಷೇತ್ರದ ಪ್ರಧಾನ ತಂತ್ರಿ ವೇದಮೂರ್ತಿ ಕೇಂಜ ಶ್ರೀಧರ್ ತಂತ್ರಿ, ಸುನ್ನಿ ಜಾಮಿಯಾ ಮಸೀದಿ ಧರ್ಮ ಗುರು ಮೌಲನಾ ಫಯಾಜ್, ಯುಬಿಎಂಸಿ ಚರ್ಚ್ ಸಾoತೂರು ಧರ್ಮ ಗುರು ರೆವರೆಂಡ್ ಸುಧೀರ್, ಡಿವೈನ್ ಸೆಂಟರ್ ಮುಲ್ಕಿ ಮುಖ್ಯಸ್ಥ ರೆವೆಂರೆಂಡ್ ಫಾದರ್ ಅಬ್ರಾಹಾಂ ಡಿಸೋಜಾ ಸಮಾರಂಭದಲ್ಲಿ ಭಾಗವಹಿಸಿದ್ದರು.

ಅಲ್ಲದೇ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ, ಮುದರಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಕುಮಾರಿ ನಮಿತಾ ಮತ್ತು ಐವಾನ್ ಡಿಸೋಜಾ ಪತ್ನಿ ಡಾ. ಕವಿತಾ ಡಿಸೋಜಾ ಕೂಡಾ ಪಾಲ್ಗೊಂಡಿದ್ದರು.‌ಕಾರ್ಯಕ್ರಮದಲ್ಲಿ ಐವಾನ್ ಡಿಸೋಜಾ ದಂಪತಿಗಳನ್ನು ಸನ್ಮಾನಿಸಲಾಯಿತು.

- Advertisement -

Latest News

error: Content is protected !!