Monday, April 29, 2024
Homeತಾಜಾ ಸುದ್ದಿಬಂದ್ ವೇಳೆ ಬಾಗಿಲು ತೆರೆದಿದ್ದ ಅಂಗಡಿ ಮುಂದೆ ಪ್ರತಿಭಟನಾಕಾರರು ಮಾಡಿದ್ದೇನು ಗೊತ್ತೇ ?

ಬಂದ್ ವೇಳೆ ಬಾಗಿಲು ತೆರೆದಿದ್ದ ಅಂಗಡಿ ಮುಂದೆ ಪ್ರತಿಭಟನಾಕಾರರು ಮಾಡಿದ್ದೇನು ಗೊತ್ತೇ ?

spot_img
- Advertisement -
- Advertisement -

ಚಾಮರಾಜನಗರ: ರೈತಪರ ಸಂಘಟನೆಗಳಿಂದ‌ ಇಂದು ಕರೆ ನೀಡಿದ್ದ ಕರ್ನಾಟಕ ಬಂದ್ ಸಮಯದಲ್ಲಿ ಅಂಗಡಿ ಬಾಗಿಲು ತೆರೆದು ವ್ಯಾಪಾರ ನಡೆಸುತ್ತಿದ್ದ ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಅಂಗಡಿ ಮುಂದೆ ಕನ್ನಡ ಪರ ಹೋರಾಟಗಾರ ನಿಜಧ್ವನಿ ಗೋವಿಂದ ರಾಜು ಸಾಷ್ಟಾಂಗ ನಮಸ್ಕಾರ ಹಾಕಿ ಬಾಗಿಲು ಮುಚ್ಚಲು ಮನವಿ ಮಾಡಿದರು.

ಪ್ರತಿಭಟನಾಕಾರರ ಕೋರಿಕೆ ಮೇರೆಗೆ ಅಂಗಡಿ ಬಾಗಿಲು ಹಾಕಲಾಯಿತು. ನಗರದಲ್ಲಿ ಬೈಕ್‌ ರ್ಯಾಲಿ ನಡೆಸುತ್ತಿರುವ ರೈತರು ತೆರೆದಿದ್ದ ಅಂಗಡಿಗಳ ಮುಚ್ಚಿಸುತ್ತಿದ್ದಾರೆ‌. ನಗರದ ಸಂತೇಮರಳ್ಳಿ ವೃತ್ತದಲ್ಲಿರುವ ಪೆಟ್ರೋಲ್ ಬಂಕ್ ಅನ್ನು ಮುಚ್ಚಲು ಕೈ ಮುಗಿದು ಕೋರಲಾಯಿತು.

ಅಗತ್ಯ ಸೇವೆಯಲ್ಲಿ ಪೆಟ್ರೋಲ್ ಬಂಕ್ ಸಹ ಒಂದು. ಆದ್ದರಿಂದ ಬಲವಂತ ಮಾಡದಂತೆ ಪೊಲೀಸರು ತಿಳಿಸಿದರು. ಬಳಿಕ‌ ಪೆಟ್ರೋಲ್ ಬಂಕ್ ನಿಂದ ರೈತರು ತೆರಳಿದರು.

ರಾಜ್ಯ ಬಂದ್ ಹಿನ್ನೆಲೆ ತೆರೆದಿರುವ ಅಂಗಡಿ, ಹೋಟೆಲ್ ಗಳನ್ನು ಒತ್ತಾಯ ಪೂರ್ವಕವಾಗಿ ಬಂದ್ ಮಾಡಿಸಲು ಪ್ರತಿಭಟನಾಕಾರರು ಮುಂದಾಗಿದ್ದು, ಹೀಗೆ ಮಾಡದಂತೆ ಪೊಲೀಸರು ಎಚ್ಚರಿಕೆ ನೀಡುತ್ತಿದರು.

- Advertisement -
spot_img

Latest News

error: Content is protected !!