Monday, April 29, 2024
Homeತಾಜಾ ಸುದ್ದಿಏಕರೂಪದ ಡ್ರೈವಿಂಗ್​ ಲೈಸೆನ್ಸ್​​​ ಮತ್ತು ರಿಜಿಸ್ಟ್ರೇಷನ್ ಸರ್ಟಿಫಿಕೇಟ್​​ಗಳ ವಿತರಣೆ: ಕೇಂದ್ರ ಸರ್ಕಾರದ ಹೊಸ ನೀತಿ!..

ಏಕರೂಪದ ಡ್ರೈವಿಂಗ್​ ಲೈಸೆನ್ಸ್​​​ ಮತ್ತು ರಿಜಿಸ್ಟ್ರೇಷನ್ ಸರ್ಟಿಫಿಕೇಟ್​​ಗಳ ವಿತರಣೆ: ಕೇಂದ್ರ ಸರ್ಕಾರದ ಹೊಸ ನೀತಿ!..

spot_img
- Advertisement -
- Advertisement -

ನವದೆಹಲಿ : ಇದೇ ಅಕ್ಟೋಬರ್ ಆರಂಭದಿಂದ ಚಾಲನಾ ಪರವಾನಗಿಯ ಹೊಸ ನಿಯಮಗಳು ಜಾರಿಯಾಗಲಿದ್ದು, ದಿನನಿತ್ಯ ಉಪಯೋಗವಾಗುವ ಈ ನಿಯಮಗಳು ಜನಸಾಮಾನ್ಯರ ಮೇಲೆ ಪರಿಣಾಮ ಬೀರಲಿವೆ. ಕೇಂದ್ರ ಸರ್ಕಾರವು ಇತ್ತೀಚೆಗೆ ವಾಹನ ನೋಂದಣಿ ಕಾರ್ಡ್​​ ವಿತರಣೆ ಹಾಗೂ ವಾಹನ ಪರವಾನಗಿ(ಡ್ರೈವಿಂಗ್​ ಲೈಸೆನ್ಸ್​​​)ಗಳಿಗೆ ಸಂಬಂಧಿಸಿದಂತೆ ಹಲವು ಬದಲಾವಣೆಗಳನ್ನು ಜಾರಿ ಮಾಡಿದೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ಬದಲಾವಣೆಗಳಿಂದ ಸರ್ಕಾರಕ್ಕೆ ಡಿಎಲ್ ಕಾರ್ಡ್​​​​​ದಾರರ ದಾಖಲೆ ಹಾಗೂ ದಂಡದ ಮಾಹಿತಿಗಳನ್ನು 10 ವರ್ಷಗಳವರೆಗೆ ಕೇಂದ್ರೀಕೃತ ಆನ್​ಲೈನ್​ ಡಾಟಾ ಬೇಸ್​​ ನಿರ್ವಹಿಸಲು ಸಾಧ್ಯವಾಗಿಸಲಿದೆ. ಇಷ್ಟು ಮಾತ್ರವಲ್ಲದೇ, ವಿಶೇಷ ಚೇತನ ಚಾಲಕರ ವಿವರಗಳನ್ನು ಒಂದೆಡೆ ಸಂಗ್ರಹಿಸಲು ವಾಹನಗಳಿಗೆ ಮಾಡಿರುವ ಬದಲಾವಣೆ, ಯಾವುದೇ ವ್ಯಕ್ತಿ ಅಂಗದಾನ ಮಾಡಿದ್ದರೆ ಅವುಗಳ ವಿವರಗಳನ್ನು ಪಡೆಯಲು ಸಹಕಾರಿಯಾಗಲಿದೆ.

ವಾಹನ ಸವಾರರು ಡಿಎಲ್ಹಾಗೂ ಆರ್​​ಸಿಗಳನ್ನು ಅಪ್​​ಡೇಟ್ ಮಾಡಿಕೊಳ್ಳಬೇಕಿದೆ. ಅಕ್ಟೋಬರ್ 1ರಿಂದ ದೇಶಾದ್ಯಂತ ಏಕರೂಪದ ವಾಹನ ಚಾಲನಾ ಪರವಾನಗಿ ಮತ್ತು ನೋಂದಣಿ ಪ್ರಮಾಣ ಪತ್ರಗಳನ್ನು ವಿತರಣೆ ಮಾಡಲಾಗುತ್ತದೆ. ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ಏಕರೂಪದ ಡ್ರೈವಿಂಗ್​ ಲೈಸೆನ್ಸ್​​​ ಮತ್ತು ರಿಜಿಸ್ಟ್ರೇಷನ್ ಸರ್ಟಿಫಿಕೇಟ್​​ಗಳ ವಿತರಣೆಗೆ ಮುಂದಾಗಿದೆ. ಹೊಸದಾಗಿ ಬರುವ ಡಿಎಲ್ ಮತ್ತು ಆರ್​​​ಸಿಗಳು ಸ್ಮಾರ್ಟ್​ ತಂತ್ರಜ್ಞಾನವನ್ನು ಹೊಂದಿವೆ. ಅಂದರೆ ಹೊಸ ಕಾರ್ಡ್​​​​​​ನಲ್ಲಿ ಅತ್ಯಾಧುನಿಕ ಮೈಕ್ರೋ ಚಿಪ್​ ಇರಲಿದೆ. ಕ್ಯೂಆರ್​​​ ಕೋಡ್​ ಹಾಗೂ ನಿಯರ್​ ಫೀಲ್ಡ್​ ಕಮ್ಯುನಿಕೇಷನ್​ಗಳು ಇರಲಿದೆ. ಈ ಕಾರ್ಡ್​​​​ಗಳು ಎಟಿಎಂ ಕಾರ್ಡ್​​​ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ.

- Advertisement -
spot_img

Latest News

error: Content is protected !!