Sunday, May 19, 2024
Homeಇತರ"ಮರಳಿ ಭಾರತಕ್ಕೆ ಬರಲು ಸಾಧ್ಯವೇ ಇಲ್ಲದಂತಾಗಿತ್ತು" : ಕರಾಳ ನೆನಪು ಬಿಚ್ಚಿಟ್ಟ ಆಫ್ಘಾನ್‌ ನಿಂದ...

“ಮರಳಿ ಭಾರತಕ್ಕೆ ಬರಲು ಸಾಧ್ಯವೇ ಇಲ್ಲದಂತಾಗಿತ್ತು” : ಕರಾಳ ನೆನಪು ಬಿಚ್ಚಿಟ್ಟ ಆಫ್ಘಾನ್‌ ನಿಂದ ಮರಳಿದ ಭಾರತೀಯ

spot_img
- Advertisement -
- Advertisement -

ಅಫ್ಘಾನಿಸ್ತಾನದ ಕಾಬೂಲ್‍ನಲ್ಲಿ ಕಬ್ಬಿಣ ಗ್ರಿಲ್‍ಗಳನ್ನು ತಯಾರಿಸುವ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಉತ್ತರಪ್ರದೇಶದ ರಾಜೇಶ್ ಪಾಂಡೆ ಅವರು, ತಾಲಿಬಾನ್ ಕ್ರೌರ್ಯದಿಂದ ಬಚಾವಾಗಿ ಬಂದ ಕ್ಷಣಗಳನ್ನು ಸ್ಮರಿಸಿಕೊಂಡಿದ್ದಾರೆ.

ತಾಲಿಬಾನಿಗಳ ವಶಕ್ಕೆ ಕಾಬೂಲ್ ಸಿಕ್ಕ ಕೂಡಲೇ ಅರಾಜಕತೆ, ಕ್ರೌರ್ಯ, ಕಾನೂನು ಉಲ್ಲಂಘನೆ ಮಿತಿಮೀರಲು ಶುರುವಾಯಿತು. ನಾವು ಕಷ್ಟಪಟ್ಟು 10 ಗಂಟೆಗೆ 8 ಕಿ.ಮೀ ದೂರದ ನಡೆದುಕೊಂಡು ಹೇಗೋ ಕಾಬೂಲ್ ವಿಮಾನ ನಿಲ್ದಾಣ ಸೇರಿಕೊಂಡೆವು. ಬಹಳ ಕಡೆಗಳಲ್ಲಿ ಬಾಂಬ್‍ಗಳು, ಗುಂಡಿನ ಶಬ್ದ ಕೇಳುತ್ತಾ ಜೀವವನ್ನು ಕೈಗಳಲ್ಲಿ ಹಿಡಿದು ಬಚಾವಾಗಿ ಬಂದೆವು. ಗುಂಪಿನಲ್ಲಿ ಸಾಗುತ್ತಿದ್ದ ಭಾರತೀಯರನ್ನು ತಾಲಿಬಾನ್ ಉಗ್ರರು ಅಪಹರಿಸಿದರು. ಆದರೆ ಭಾರತ ಸರ್ಕಾರದ ಜಾಗ್ರತೆಯಿಂದಾಗಿ ಕೆಲವೇ ಗಂಟೆಗಳಲ್ಲಿ ಭಾರತೀಯರನ್ನು ಬಿಡುಗಡೆ ಮಾಡಲಾಯಿತು ಎಂದು ಪಾಂಡೆ ಹೇಳಿದ್ದಾರೆ.

ಆರು ದಿನಗಳ ಮುನ್ನ ಅವರು ಅಫಘಾನಿಸ್ತಾನದಿಂದ ಜಾನ್ ಪುರ್ ಮುದಿಯಾರಿ ಗ್ರಾಮಕ್ಕೆ ಬಂದು ಕುಟುಂವನ್ನು ಸೇರಿಕೊಂಡಿದ್ದಾರೆ.

- Advertisement -
spot_img

Latest News

error: Content is protected !!