Thursday, June 4, 2026
Homeಕರಾವಳಿಮಂಗಳೂರುಕಡಬ : ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಬಳಿಯೇ ಭಿಕ್ಷೆ ಬೇಡಿದ ಭಿಕ್ಷುಕ

ಕಡಬ : ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಬಳಿಯೇ ಭಿಕ್ಷೆ ಬೇಡಿದ ಭಿಕ್ಷುಕ

- Advertisement -
- Advertisement -

ಕಡಬ : ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಬಳಿಯೇ ಭಿಕ್ಷುಕನೊಬ್ಬ ಭಿಕ್ಷೆ ಬೇಡಿದ ಘಟನೆ ಕುಕ್ಕೆ ಸುಬ್ರಮಣ್ಯದಲ್ಲಿ ನಡೆದಿದೆ.ಕುಕ್ಕೆ ಸುಬ್ರಹ್ಮಣ್ಯ ದಲ್ಲಿ  ಪ್ರಾಕೃತಿಕ ವಿಕೋಪ ಮುಂಜಾಗ್ರತಾ ಸಭೆಯ  ಹಿನ್ನೆಲೆಯಲ್ಲಿ    ಮೇ 16.ದ.ಕ  ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದರು.ಆದಿಶೇಷ ವಸತಿ ಗೃಹದ ಸಭಾಂಗಣದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಹೊರ ಬರುವ ವೇಳೆ   ಆದಿ ಸುಬ್ರಹ್ಮಣ್ಯದ ಬಳಿ ಭಿಕ್ಷುಕನೊಬ್ಬ ಎದುರಾಗಿದ್ದಾನೆ

ಜಿಲ್ಲಾಧಿಕಾರಿಯವರು ಕಾರಿನತ್ತ ಬರುತ್ತಿದ್ದಂತೆ ಭಿಕ್ಷುಕ ಕೈ ಚಾಚಿದರೂ ಗಮನಿಸಲಿರಲಿಲ್ಲ .ಹೀಗಾಗಿ  ಕಾರಲ್ಲಿ ಕುಳಿತ ಬಳಿಕವೂ ಮತ್ತೆ ಕೈಯೊಡ್ದಿದ್ದಾನೆ. ಈ ವೇಳೆ  ಡಿಸಿಯವರು ಕೈಸನ್ನೆಮೂಲಕವೇ ಇಲ್ಲವೆಂದು ಸೂಚಿಸಿದಾಗ ಮತ್ತೆ ಕೈಚಾಚಿದ್ದು ಈ ವೇಳೆ  ಎರಡು ಕೈ ಜೋಡಿಸಿ ನಮಸ್ಕರಿಸಿದ್ದಾರೆ.ಈ ಕುರಿತ ಪೋಟೊ,ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ  ವೈರಲ್ ಆಗಿದೆ.

- Advertisement -

Latest News

error: Content is protected !!