Monday, June 8, 2026
Homeಪ್ರಮುಖ-ಸುದ್ದಿಮೈಸೂರು ಮೃಗಾಲಯದಲ್ಲಿ ಸಾಕಿದ ಮಾವುತನನ್ನೇ ಕೊಂದ ಆನೆ

ಮೈಸೂರು ಮೃಗಾಲಯದಲ್ಲಿ ಸಾಕಿದ ಮಾವುತನನ್ನೇ ಕೊಂದ ಆನೆ

- Advertisement -
- Advertisement -

ಮೈಸೂರು : ವಿಶ್ವವಿಖ್ಯಾತ ಮೈಸೂರು ಮೃಗಾಲಯದ ಆನೆಯೊಂದು ತನ್ನ ಸೇವಕನನ್ನೇ ತುಳಿದು ಸಾಯಿಸಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ. ಹರೀಶ್ (38) ಆನೆ ದಾಳಿಯಿಂದ ಮೃತಪಟ್ಟ ಮಾವುತ.


ಕಳೆದ ಐದು ದಿನಗಳಿಂದ ರಜೆ ಮೇಲೆ ತೆರಳಿದ್ದ ಹರೀಶ್ ಇವತ್ತು ಕೆಲಸಕ್ಕೆ ಹಾಜರಾಗಿದ್ದರು. ಈ ಹಿಂದಿನಂತೆಯೇ ಆನೆಯ ಮೈದಡವಿ ಹುಲ್ಲು ಹಾಕುವ ಸಂದರ್ಭದಲ್ಲಿ ಆತನನ್ನು ಸೊಂಡಿಲಿನಿಂದ ಎತ್ತಿ ಕೆಳಕ್ಕೆ ಹಾಕಿ ಹೊಸಕಿದೆ.

ಇದರಿಂದ ತಬ್ಬಿಬ್ಬಾದ ಇತರೆ ಸಿಬ್ಬಂದಿ ಕೂಡಲೇ ಹರೀಶರನ್ನು ಆನೆಯಿಂದ ಬಿಡಿಸಿಕೊಂಡು ತಕ್ಷಣವೇ ಗೋಪಾಲಗೌಡ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದರಾದರೂ ಫಲಕಾರಿಯಾಗದೆ ಹರೀಶ್ ಸಾವನ್ನಪ್ಪಿದರು ಎಂದು ಮೃಗಾಲಯದ ಮೂಲಗಳು ತಿಳಿಸಿವೆ.
ಈ ಕುರಿತು ನಜರ್ ಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!