Monday, June 8, 2026
Homeತಾಜಾ ಸುದ್ದಿಅಯೋಧ್ಯೆಯಲ್ಲಿ 'ಕರ್ನಾಟಕ ಯಾತ್ರಿ ನಿವಾಸ'ಕ್ಕೆ 2 ಎಕರೆ ಜಾಗ ಕೋರಿ ಯುಪಿ ಸಿಎಂಗೆ ಬಿಎಸ್​ವೈ...

ಅಯೋಧ್ಯೆಯಲ್ಲಿ ‘ಕರ್ನಾಟಕ ಯಾತ್ರಿ ನಿವಾಸ’ಕ್ಕೆ 2 ಎಕರೆ ಜಾಗ ಕೋರಿ ಯುಪಿ ಸಿಎಂಗೆ ಬಿಎಸ್​ವೈ ಪತ್ರ

- Advertisement -
- Advertisement -

ಬೆಂಗಳೂರು : ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣವಾಗುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದಾರೆ.


ಅಯೋಧ್ಯೆಯ ಶ್ರೀರಾಮ ಮಂದಿರದ ಹತ್ತಿರವೇ ಕರ್ನಾಟಕದ ಯಾತ್ರಿ ನಿವಾಸ ನಿರ್ಮಿಸಲು ಆದಿತ್ಯನಾತ್ ಬಳಿ ಸೈಟ್ ಕೋರಿ ಸಿಎಂ ಪತ್ರ ಬರೆದಿದ್ದಾರೆ. ಕರ್ನಾಟಕದಿಂದ ಅಯೋಧ್ಯೆಗೆ ದೊಡ್ಡ ಸಂಖ್ಯೆಯಲ್ಲಿ ತೆರಳುವ ಭಕ್ತಾದಿಗಳ ಅನುಕೂಲಕ್ಕಾಗಿ ಸುಸಜ್ಜಿತ ಯಾತ್ರಾ ಭವನದ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ಈ ಉದ್ದೇಶಕ್ಕಾಗಿ 2 ಎಕರೆ ಭೂಮಿಯನ್ನು ಮಂಜೂರು ಮಾಡುವಂತೆ ಪತ್ರದ ಮೂಲಕ ಆದಿತ್ಯನಾಥ್​ಗೆ ಯಡಿಯೂರಪ್ಪ ಮನವಿ ಮಾಡಿದ್ದಾರೆ. ಇದೇ ವೇಳೆ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಯಶಸ್ವಿಯಾಗಿ ಶಿಲಾನ್ಯಾಸ ನೆರವೇರಿಸಿದ್ದಕ್ಕಾಗಿ ಶುಭಾಶಯವನ್ನೂ ತಿಳಿಸಿದ್ದಾರೆ.

- Advertisement -

Latest News

error: Content is protected !!